ಕೊನೆಯಿಲ್ಲದ ಅಸಹನೀಯ ಮಾತು

ಶನಿವಾರ, ಏಪ್ರಿಲ್ 20, 2019
29 °C

ಕೊನೆಯಿಲ್ಲದ ಅಸಹನೀಯ ಮಾತು

Published:
Updated:

ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪನವರು ರಾಹುಲ್ ಗಾಂಧಿ ಅವರನ್ನು ‘ಬಚ್ಚಾ’ ಅಂದರು. ಅದಕ್ಕೆ ದಿನೇಶ್ ಗುಂಡೂರಾವ್ ‘ಇದು ಯಡ್ಡಿಯವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದರು. ಕೆಲ ದಿನಗಳ ಹಿಂದೆ ಇದೇ ಗುಂಡೂರಾವ್ ಅವರು ‘ನರೇಂದ್ರ ಮೋದಿ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ಕಾರ್ಯಕರ್ತರಿಗೆ ಕರೆಯಿತ್ತಿದ್ದರು. ರಾಹುಲ್ ಗಾಂಧಿ ಮೋದಿಯವರನ್ನು ‘ಕಳ್ಳ’ ಎಂದರೆ, ಸಿದ್ದರಾಮಯ್ಯನವರು ‘ಮೋಸಗಾರ, ನರಭಕ್ಷಕ’ ಎನ್ನುತ್ತಾರೆ. ರೇವಣ್ಣ, ಕುಮಾರಸ್ವಾಮಿಯವರಂತೂ ಸುಮಲತಾ ಅವರ ಜನ್ಮ ಜಾಲಾಡುತ್ತಿದ್ದಾರೆ.

ಬಿಜೆಪಿಯ ಸುರೇಶ್‌ ಗೌಡರು ಶಾಸಕ ಗೌರಿಶಂಕರ್ ಅವರಿಗೆ ‘ದೊಣ್ಣೆಯಿಂದ ಹೊಡೆಯಿರಿ’ ಎಂದು ಜನರಿಗೆ ಆದೇಶಿಸುತ್ತಾರೆ. ಅನಂತಕುಮಾರ ಹೆಗಡೆ ಅವರಂತೂ ರಾಹುಲ್ ಗಾಂಧಿ ಕುಟುಂಬದ ಮಾನ ಹರಾಜಿಗೆ ಇಳಿದಿದ್ದಾರೆ. ಮೊನ್ನೆ ಕಾಂಗ್ರೆಸ್ ಶಾಸಕರೊಬ್ಬರು ‘ಮೋದಿಗೆ ಕಲ್ಲು ಹೊಡೆಯಿರಿ’ ಎಂದರು. ಬೇಳೂರು ಗೋಪಾಲಕೃಷ್ಣ ಅವರು ‘ಮೋದಿಯನ್ನು ಸಾಯಿಸಿರಿ’ ಎಂದು ಹುಕುಂ ಹೊರಡಿಸಿದರು... ಹೀಗೆ ಕೊನೆಯಿಲ್ಲದ ಅಸಹನೀಯ ಮಾತುಗಳು! ಕಾಂಗ್ರೆಸ್ಸಿಗರು, ಜೆಡಿಎಸ್‌ನವರು ಹೇಳಿದಾಗ ಬಿಜೆಪಿಯವರು, ಬಿಜೆಪಿಯವರು ಹೇಳಿದಾಗ ಮಿತ್ರಪಕ್ಷಗಳು ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವುದು ಮಹಾ ಚೋದ್ಯವಾಗಿದೆ. ಈ ರಾಜಕಾರಣಿಗಳ ನಾಲಿಗೆ ಆಚಾರವುಳ್ಳದ್ದು ಆಗುವುದು ಯಾವಾಗ?

- ಬೆಂಗಳೂರು

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !