ಮುದ್ರಿತ ಪುಸ್ತಕ: ಅಪೇಕ್ಷಿತ ನಡೆ

ಮಕ್ಕಳ ಮೊಬೈಲ್ ಫೋನ್ ಹಂಬಲವು ಓದುವ ಅಭ್ಯಾಸವನ್ನೇ ಕಳೆದಿದೆ ಎಂಬ ರಾಜಕುಮಾರ ಕುಲಕರ್ಣಿ ಅವರ ಆತಂಕ (ಸಂಗತ, ಅ. 4) ಚಿಂತನಾರ್ಹ. ಮಕ್ಕಳಲ್ಲಿ ಅಷ್ಟೇ ಏಕೆ ದೊಡ್ಡವರಲ್ಲಿಯೂ ಅನಗತ್ಯವಾಗಿ ಮೊಬೈಲ್ ಬಳಸುವುದು ಹೆಚ್ಚಾಗಿದೆ. ಕೆಲವರಿಗೆ ಪುಸ್ತಕಗಳನ್ನು ಸಹ ಆನ್‌ಲೈನ್‌ನಲ್ಲಿಯೇ ಓದುವ ಅಭ್ಯಾಸವಿದೆ. ಆದರೆ, ಮುದ್ರಿತ ಪುಸ್ತಕದ ಓದುವಿಕೆಯು ಓದುಗ ಮತ್ತು ಪುಸ್ತಕದ ನಡುವೆ ಬಾಂಧವ್ಯ ಸೃಷ್ಟಿಸುತ್ತದೆ. ಹೆಚ್ಚು ಮೊಬೈಲ್ ಬಳಕೆ ಕಣ್ಣಿನ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ, ಆನ್‌ಲೈನ್ ಓದುವಿಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಎಲ್ಲ ಮಾಹಿತಿಯೂ ಮೊಬೈಲ್‌ನಲ್ಲಿಯೇ ಸಿಗುತ್ತದೆ ಎಂಬ ಭ್ರಮೆಯನ್ನು ಮಕ್ಕಳು ಮತ್ತು ಯುವಜನರು ಮೈಗೂಡಿಸಿಕೊಂಡಿರುವುದು ಸರಿಯಲ್ಲ.
ಡಾ. ಡಿ. ರಾಜಗೋಪಾಲ್, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.