ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ನಾಗರಿಕ ಸಮಾಜಕ್ಕೆ ಶೋಭೆ ತಾರದು

Last Updated 24 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಉಡುಪಿಯ ಜಾತ್ರೆಯೊಂದರಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಹಾಕಿರುವ ಕೆಟ್ಟ ಘಟನೆ ಸಾಂಕ್ರಾಮಿಕದ ರೀತಿ ಎಲ್ಲ ಕಡೆಗೂ ವ್ಯಾಪಿಸುತ್ತಿದೆ. ಈ ದುರುಳರು ದೇಶವನ್ನು ಏನು ಮಾಡಹೊರಟಿದ್ದಾರೆ? ‘ಜಾತ್ರೆ ವೇಳೆ ವ್ಯವಸ್ಥಾಪನಾ ಸಮಿತಿಯವರೇ ಅಂಗಡಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಾರೆ. ಹೀಗಾಗಿ, ಇದು ನೇರವಾಗಿ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯವಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರ. ಈ ರೋಗಕ್ಕೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನೂ ಚುನಾವಣೆಯ ಅಸ್ತ್ರವಾಗಿ ಬಳಸಿಕೊಂಡು ಆಟವಾಡಹೋದರೆ ಇದು ದೇಶದ ವಿದೇಶಾಂಗ ನೀತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ತರ್ಕ, ಕಾನೂನನ್ನು ಮೀರಿದ್ದು ಮಾನವೀಯತೆ. ಈ ನೆಲೆಯಿಂದ ನೋಡಿದರೆ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ನಾಗರಿಕ ಸಮಾಜಕ್ಕೆ ಶೋಭೆ ತರುವಂತಿಲ್ಲ ಎಂದು ಅತ್ಯಂತ ದುಃಖದಿಂದ ಹೇಳಬಯಸುತ್ತೇವೆ. ಮುಖ್ಯಮಂತ್ರಿಯವರೇ ಮೊದಲು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕವನ್ನು ನಾಡಗೀತೆಯ ಆಶಯದಂತೆ ಸಂರಕ್ಷಿಸಿ ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

-ಡಾ. ಕೆ.ಮರುಳಸಿದ್ಧಪ್ಪ, ಪ್ರೊ. ಎಸ್.ಜಿ.ಸಿದ್ಧರಾಮಯ್ಯ, ಡಾ. ಕಾಳೇಗೌಡ ನಾಗವಾರ, ಪ್ರೊ. ಚಂದ್ರಶೇಖರ ತಾಳ್ಯ, ಬಿ.ಟಿ.ಲಲಿತಾ ನಾಯಕ್, ರುದ್ರಪ್ಪ ಹನಗವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT