ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ವಾಸ್ತವಾಂಶ ಮನದಟ್ಟಾಗಲಿ

Last Updated 9 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಯಡಿಯೂರಪ್ಪ ತಮ್ಮ ಏಕಸದಸ್ಯ ಸಂಪುಟವನ್ನು ಇನ್ನೂ ವಿಸ್ತರಿಸಲು ಸಾಧ್ಯವಾಗದೇ ಇರುವುದರಲ್ಲಿ ಅವರ ತಪ್ಪೇನೂ ಇಲ್ಲ. ಮಂತ್ರಿಮಂಡಲಕ್ಕೆ ಸೇರಬೇಕಾದವರ ಪಟ್ಟಿಗೆ ಬಿಜೆಪಿ ವರಿಷ್ಠರು ಸಮ್ಮತಿ ನೀಡಲು ಮೀನಮೇಷ ಎಣಿಸುತ್ತಿರುವುದು ಒಂದು ಕಾರಣ. ಮತ್ತೊಂದೆಡೆ, ಸಂಪುಟ ಸೇರಲು ಹಾಲಿ ಶಾಸಕರು, ಮಾಜಿ ಮಂತ್ರಿಗಳು, ಹಾಲಿಅತೃಪ್ತರು, ಮಾಜಿ ಅತೃಪ್ತರು...

ಹೀಗೆ ದೊಡ್ಡ ಪಡೆಯೇ ಸಜ್ಜಾಗಿದೆ. ಮಂತ್ರಿಮಂಡಲ ರಚಿಸುವುದು ಹಾವಿನ ಹುತ್ತಕ್ಕೆಕೈ ಹಾಕಿದಂತೆಯೇ ಸರಿ‌. ಇಲ್ಲಿ ಜಿಲ್ಲಾವಾರು, ಜಾತಿವಾರು ಪ್ರಾತಿನಿಧ್ಯ ನೀಡಬೇಕಲ್ಲದೆ ವಿವಿಧ ಜಾತಿಗಳ ಒಳ ಪಂಗಡದವರನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಇನ್ನುಹೈಕಮಾಂಡ್ ವಲಯದಲ್ಲಿ ಪ್ರಭಾವ ಹೊಂದಿರುವಂತಹವರು, ದುಡ್ಡಿನ ಕುಳಗಳು, ಮಹಿಳಾಮಣಿಗಳು, ಸಾಮಾಜಿಕ– ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡವರು...

ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಹೀಗಾಗಿಯೇ ಸಂಪುಟ ರಚನೆ ಅಥವಾ ವಿಸ್ತರಣೆಯು ಮುಖ್ಯಮಂತ್ರಿಯಾದವರಿಗೆ ಕಬ್ಬಿಣದ ಕಡಲೆ ಇದ್ದ ಹಾಗೆ.ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನಜೀವನ ಸಂಕಷ್ಟಕ್ಕೆ ಈಡಾಗಿದೆ. ಯಡಿಯೂರಪ್ಪ ವಾಸ್ತವಾಂಶಗಳನ್ನುಪಕ್ಷದ ವರಿಷ್ಠರಿಗೆ ಮನದಟ್ಟು ಮಾಡಿಕೊಟ್ಟು, ಸಾಧ್ಯವಾದಷ್ಟು ಬೇಗ ಸಂಪುಟವನ್ನು ರಚಿಸಲಿ.

ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT