ಭಾನುವಾರ, ಜನವರಿ 23, 2022
26 °C

ವಾಚಕರವಾಣಿ: ಮೊಬೈಲ್‌ ನಿಷ್ಕ್ರಿಯಗೊಳ್ಳುವ ಈ ಪರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಮೊಬೈಲ್ ಬಳಸಲಾರಂಭಿಸಿದ ಕಳೆದ ಇಪ್ಪತ್ತು ವರ್ಷಗಳಿಂದಲೂ ಬಿಎಸ್‌ಎನ್‌ಎಲ್ ಚಂದಾದಾರನಾಗಿದ್ದೇನೆ. ಇದಕ್ಕೆ ಕಾರಣ, ನನ್ನ ಮಿತಿಯಲ್ಲೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಬೆಂಬಲವಾಗಿ ನಿಲ್ಲುತ್ತಾ ಅದು ಖಾಸಗಿ ಸಂಸ್ಥೆಗಳೊಡನೆಯ ಸ್ಪರ್ಧೆಯಲ್ಲಿ ಸೋತು ಕಣ್ಮುಚ್ಚಬಾರದೆಂಬ ಕಾಳಜಿ. ಆದರೆ ಕೆಲವು ವರ್ಷಗಳಿಂದ ಇದರ ಸೇವೆಯ ಗುಣಮಟ್ಟ ಕಳಪೆಯಾಗುತ್ತಾ ಹೋಗಿ ನನ್ನ ಈ ಬದ್ಧತೆ ತಪ್ಪೇನೋ ಅನ್ನಿಸತೊಡಗಿದೆ. ಯಾವಾಗ ನೋಡಿದರೂ ಸರ್ವರ್‌ ಇಲ್ಲವೇ ನೆಟ್‌ವರ್ಕ್ ಸಮಸ್ಯೆ.

ವಿಚಿತ್ರವೆಂದರೆ, ನಮ್ಮೂರಿನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಅವಧಿಯುದ್ದಕ್ಕೂ ಮೊಬೈಲ್ ಕೆಲಸ ಮಾಡುವುದಿಲ್ಲ. ವಿದ್ಯುತ್ ಪೂರೈಕೆಯನ್ನು ಎಸ್ಕಾಂ ತನ್ನದೇ ಕಾರಣಗಳಿಗಾಗಿ (ಉದಾ: ರಿಪೇರಿ ಕೆಲಸ) ಇಡೀ ಹಗಲು ಸ್ಥಗಿತಗೊಳಿಸಿದರೆ, ಸ್ಥಗಿತಗೊಂಡ ಪ್ರದೇಶದಲ್ಲಿ ಮೊಬೈಲ್ ನಿಷ್ಕ್ರಿಯವಾಗುತ್ತದೆ. ನಮ್ಮೂರು ಸ್ಮಾರ್ಟ್ ಸಿಟಿಯಾಗುತ್ತಿರುವ ಸಿದ್ಧತೆಯಲ್ಲಿರುವುದರಿಂದ ಹಲವು ಕಡೆ ಹಲವು ಕಾಮಗಾರಿಗಳು ನಡೆಯುತ್ತಿದ್ದು ಹಲವು ಸಂದರ್ಭಗಳಲ್ಲಿ ಅಲ್ಲೆಲ್ಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ನಮ್ಮ ಮೊಬೈಲ್‌ಗಳೂ ಸ್ಥಗಿತಗೊಳ್ಳುತ್ತವೆ.

ಈ ಗೋಳನ್ನು ಕೇಳುವವರೂ ಯಾರೂ ಇಲ್ಲ. ಹುಡುಕಿಕೊಂಡು ಹೋಗಿ ಹೇಳಿದರೆ, ಸಿಬ್ಬಂದಿಯ ಅತೀವ ಕೊರತೆಯ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಹಾಗಾದರೆ ಗ್ರಾಹಕರ ಗತಿ?

- ಡಿ.ಎಸ್.ನಾಗಭೂಷಣ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು