ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಬದಲಾವಣೆ ಸಾಧ್ಯ

Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕಾಗಿ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ನಿರ್ಧಿರಿಸಿರುವುದು ಸ್ವಾಗತಾರ್ಹ. ಇದು ಸಾಧ್ಯವಾದರೆ ನಿಜಕ್ಕೂ ಇದೊಂದು ಮಹತ್ವದ ಬದಲಾವಣೆ. ಹೆಣ್ಣು ಮಕ್ಕಳು ಸಂತಸಪಡುವ ವಿಷಯ. ಇದರಿಂದ ಮಹಿಳೆಯರ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವುದು. ಶಿಶು ಮತ್ತು ಬಾಣಂತಿಯರ ಮರಣ ಪ್ರಮಾಣ ತಗ್ಗಿಸಲು ನೆರವಾಗುವುದು. ಮತ್ತೊಂದು ವಿಷಯದಲ್ಲಿ ಸಮಾನತೆ ಸಾಧಿಸಲು ಅನುವಾಗುವುದು.

ಆದರೆ, ಇದರ ಅಗತ್ಯ ಮತ್ತು ಪಾಲನೆ ಕುರಿತು ಗ್ರಾಮೀಣ ಭಾಗದ ಜನರ ಮನವೊಲಿಸುವುದು ಸವಾಲಿನ ಕೆಲಸ. 18 ತುಂಬಿದರೆ ಸಾಕು ಮಗಳಿಗೆ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗೋಣ ಎಂದು ಕೆಲವು ಪೋಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಅದಕ್ಕೆ ಅವರದೇ ಆದ ಕಾರಣ–ತರ್ಕಗಳು ಇರುತ್ತವೆ. ಹಾಗಾಗಿ, ಅರಿವು ಮೂಡಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯಬೇಕಾಗುತ್ತದೆ.

–ಶೈಲಾ ನಾಗರಾಜ ಮೇಟಿ, ಬೇಗೂರು, ಕಲಘಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT