ಬುಧವಾರ, ಏಪ್ರಿಲ್ 1, 2020
19 °C

ಡಿ.ಸಿ ನಡೆ ಸ್ವಾಗತಾರ್ಹ, ಆದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಸ್ಥಾನಗಳಲ್ಲಿ ಇನ್ನು ಮುಂದೆ ಅರ್ಚಕರು ಕನ್ನಡದಲ್ಲೇ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶಿಸಿದ್ದಾರೆ. ಇದೊಂದು ಸ್ವಾಗತಾರ್ಹ ಕ್ರಮ. 80ರ ದಶಕದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್ ಅವರು ಆಯ್ದ ಕೆಲವು ಮುಜರಾಯಿ ದೇವಸ್ಥಾನಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸಿದ್ದರು. ‘ಕನ್ನಡದ ಪೂಜಾರಿ’ ಎಂದೇ ಹೆಸರಾಗಿರುವ ಹಿರೇಮಗಳೂರು ಕಣ್ಣನ್, ಹಿರೇಮಗಳೂರಿನ ರಾಮದೇವರ ದೇವಸ್ಥಾನದಲ್ಲಿ ಬಹಳಷ್ಟು ವರ್ಷಗಳಿಂದ ಕನ್ನಡದಲ್ಲೇ ಮಂತ್ರಗಳನ್ನು ಪಠಿಸುತ್ತಾರೆ.

ದೇವರ ಪೂಜೆಯಲ್ಲಿ ಹೇಳಲಾಗುವ ಮಂತ್ರಗಳ ಅರ್ಥವನ್ನು ನಾವು ತಿಳಿದುಕೊಂಡರೆ, ನಮ್ಮ ಪೂಜೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂಬುದು ಒಪ್ಪತಕ್ಕ ವಿಚಾರ. ಆದರೆ ಮಂತ್ರಗಳ ಅರ್ಥ ತಿಳಿದುಕೊಳ್ಳಲು ಎಷ್ಟು ಜನ ಆಸಕ್ತರಾಗಿರುತ್ತಾರೆ?

ವಿವಿಧ ಬಗೆಯ ಚಿಂತೆಗಳನ್ನು ತಲೆಯಲ್ಲಿ ಹೊತ್ತುಕೊಂಡೇ ದೇವಸ್ಥಾನದ ಒಳಗೆ ಅಡಿಯಿಡುವ ಜನರ ನಡುವೆ, ಅರ್ಚಕರು ಹೇಳುವ ಮಂತ್ರಗಳನ್ನು ಶ್ರದ್ಧಾಭಕ್ತಿಯಿಂದ ಕೇಳಿಸಿಕೊಳ್ಳುವ ಆಸ್ತಿಕರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಅದೇನೇ ಇರಲಿ, ಜಿಲ್ಲಾಧಿಕಾರಿಯ ಈ ನೂತನ ಕ್ರಮ ಸಾರ್ಥಕವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.

–ಕೆ.ವಿ.ವಾಸು, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)