ಬುಧವಾರ, ನವೆಂಬರ್ 20, 2019
27 °C

ಚಂದಮಾಮ ಯಾಕ ಸಿಟ್ಟಾದೆ?

Published:
Updated:

ನಿದ್ದೆಗೆಟ್ಟು ರಾತ್ರಿ ಎಲ್ಲಾ ಎದ್ದು ಕುಂತಿದ್ನೋ ಯಪ್ಪಾ...

ನಿದ್ದೆ ಬರಲಾರ್ದಂಗೆ ಮಾಡಿಬಿಟ್ಟಿಯಲ್ಲೋ ಮಾರಾಯ

ನಾವು ಅಂತಾದ ಏನ್‌ ತಪ್ಪು ಮಾಡಿವೋ ಮಾಮ

ನಮ್ಮ ಅವ್ವನ್ನ ತವರಮನಿಗಿ ಕಳಿಸಿಲ್ಲ ಅಂತ

ಸಿಟ್ಟಾಗಿಯೇನೋ

ನಾವ್‌ ಕಳಿಸಿದ ಗಾಡಿ ಯಾಕ ತಡಿದಿಯೋ

ಈ ಕೋಪತಾಪ ಎಲ್ಲಾ ಬಿಟ್ಟಬಿಡು ಚಂದಮಾಮ

ನಾವ್‌ ಮತ್ತ ಗಾಡಿ ಕಳಸ್ತೀವಿ ಮಾರಾಯ

ನಿನಗ ಏನಾರ ಬೇಕಿತ್ತು ಅಂದ್ರ ಈಗ ಲಿಸ್ಟ್‌ ಮಾಡಿ

ಆರ್ಬಿಟರ್‌ ಕೂಡ ಸಂದೇಶ ಕಳಿಸಿಬಿಡಪ

ಹಣ ಬೇಕಿತ್ತು ಅಂದ್ರ ಸ್ವಿಸ್‌ ಬ್ಯಾಂಕಿಂದ ತಗದ್‌ಕೊಡ್ತೀವಿ

ಗಾಡಿ ಮಾತ್ರ ತಡಿಬ್ಯಾಡೋ...

-ಸದಾಶಿವ ಎಂ., ಎಚ್‌.ಸಿದ್ಧಾಪೂರ

ಪ್ರತಿಕ್ರಿಯಿಸಿ (+)