ಶುಕ್ರವಾರ, ಏಪ್ರಿಲ್ 16, 2021
31 °C

ಚಂದ್ರಯಾನ–2: ನಂಬಿಕೆ ವೈಯಕ್ತಿಕವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿ.ಡಿ. ನ್ಯೂಸ್ ಬೆಳಗಿನ ಆರರ ವಾರ್ತಾ ಸಂಚಿಕೆಯನ್ನು ರದ್ದು ಮಾಡಿ, ತಿರುಪತಿ ದೇವಸ್ಥಾನಕ್ಕೆ ರಾಷ್ಟ್ರಪತಿ ಭೇಟಿ ನೀಡಿದ್ದನ್ನು ತೋರಿಸಿತು. ಅದರಲ್ಲೇ ಇಸ್ರೊ ಅಧ್ಯಕ್ಷ ಡಾ. ಕೆ.ಶಿವನ್ ಧಾರ್ಮಿಕ ಉಡುಪಿನಲ್ಲಿ ಅಲ್ಲಿಂದಲೇ ಚಂದ್ರಯಾನ-2ರ ಬಗೆಗೆ ವೈಜ್ಞಾನಿಕ ಮಾಹಿತಿ ನೀಡಿದ್ದನ್ನೂ ನೋಡಿದೆ. ಇಬ್ಬರೂ ಯಾನದ ಯಶಸ್ಸಿಗೆ ಪ್ರಾರ್ಥಿಸಿರಬಹುದು. ಆದರೆ, ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಉಡಾವಣೆ ಮುಂದಕ್ಕೆ ಹೋಯಿತು. ಬಾಲಾಜಿ ಅನುಗ್ರಹ ಇರಲಿಲ್ಲ!

ಬಿದಿಗೆ, ಚೌತಿ ಚಂದ್ರನ ದರ್ಶನ ನೋಡಿ ಹಬ್ಬ ಆಚರಿಸುವುದು ನಂಬಿಕೆ. ಆದರೆ, ಸರ್ಕಾರದ ಕಾರ್ಯಕ್ರಮದಲ್ಲಿ ಇದನ್ನು ತರುವುದು ಎಷ್ಟು ಸರಿ? ಉಪಗ್ರಹವನ್ನು ಉಡಾಯಿಸುವವರು, ಅದನ್ನು ನೋಡಲು ಹೋಗುವ ಗಣ್ಯರು ತಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಹೀಗೆ ಸಾರ್ವಜನಿಕವಾಗಿ ತೋರ್ಪಡಿಸುವುದು, ಮಾಧ್ಯಮಗಳು ಪ್ರಚಾರ ಕೊಡುವುದು ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕಾರಿ ಆಗದು.

– ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು