ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲಿ ರಾಸಾಯನಿಕ ಉಗ್ರಾಣ!

Last Updated 4 ಫೆಬ್ರುವರಿ 2021, 16:04 IST
ಅಕ್ಷರ ಗಾತ್ರ

ತುಮಕೂರು ತಾಲ್ಲೂಕಿನ ಗ್ರಾಮವೊಂದರ ಮನೆಯಲ್ಲಿ ಜಿಲೆಟಿನ್ ಸ್ಫೋಟಗೊಂಡ ಸುದ್ದಿಯು (ಪ್ರ.ವಾ.,ಫೆ. 3) ಔಷಧ ಕಾರ್ಖಾನೆ ಮತ್ತು ಗಣಿಗಳಲ್ಲಿ ನಿರತರಾದವರಿಗಷ್ಟೇ ಅಲ್ಲದೆ ಜನಸಾಮಾನ್ಯರಿಗೂ ಎಚ್ಚರಿಕೆಯಾಗಿದೆ. ದೈನಂದಿನ ಜೀವನ ಕ್ರಮದಲ್ಲಿ ರಾಸಾಯನಿಕಗಳ ಬಳಕೆ ಹಾಗೂ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಪ್ರತಿಯೊಂದು ಮನೆಯೂ ರಾಸಾಯನಿಕ ವಸ್ತುಗಳ ‘ಉಗ್ರಾಣ’ವಾಗುತ್ತಿದೆ.

ಮನೆಗಳಲ್ಲಿ ಸಂಗ್ರಹವಾಗುವ ಔಷಧಿ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೊಳೆನಾಶಕ, ಸೌಂದರ್ಯವರ್ಧಕ, ಸ್ವಚ್ಛಕಾರಕಗಳು, ಪೆಟ್ರೋಲ್, ಡೀಸೆಲ್, ಬ್ಯಾಟರಿ ತ್ಯಾಜ್ಯ, ಬಣ್ಣಕಾರಕಗಳು ಹೀಗೆ ಅನೇಕ ಬಗೆಯ ರಾಸಾಯನಿಕಗಳನ್ನು ಸರಿಯಾದ ಕ್ರಮದಲ್ಲಿ ಬಳಸುವ ಬಗ್ಗೆ ಜನರಿಗೆ ಅರಿವು ಅಗತ್ಯ. ಆದರೆ ಇಂಥ ಅರಿವಿಗಿಂತ ಹೆಚ್ಚಾಗಿ ಜಾಹೀರಾತುಗಳ ಪ್ರಭಾವದಿಂದ ಅಪಾಯಕಾರಿ ರಾಸಾಯನಿಕಗಳು ಮನೆಗಳನ್ನು ಸೇರಿ, ಆರೋಗ್ಯ ಮತ್ತು ಪರಿಸರದ ಮೇಲಿನ ದುಷ್ಪರಿಣಾಮಕ್ಕೆ ಕಾರಣವಾಗುತ್ತಿವೆ. ಯಾವುದೇ ರಾಸಾಯನಿಕಗಳನ್ನು ಮನೆಗೆ ತರುವುದಕ್ಕೆ ಮುಂಚಿತವಾಗಿ ಈ ವಸ್ತು ತಮಗೆ ಅತ್ಯವಶ್ಯಕವೇ ಎಂದು ಆಲೋಚಿಸಬೇಕು. ನಂತರ ಇವುಗಳನ್ನು ಬಳಸುವ ಮತ್ತು ವಿಲೇವಾರಿ ಮಾಡುವ ಕ್ರಮ ಹೇಗೆ ಎಂಬುದನ್ನೂ ತಿಳಿಯುವುದು ಸೂಕ್ತ.

ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT