ಬುಧವಾರ, ನವೆಂಬರ್ 20, 2019
22 °C

ಹುಸಿ ಭರವಸೆಗಳು ಸಾಧುವೇ?

Published:
Updated:

ರಾಜ್ಯದ ಮೊದಲ ಚೆಸ್ ಗ್ರ್ಯಾಂಡ್‌ಮಾಸ್ಟರ್ ಎಂ.ಎಸ್.ತೇಜ್‌ ಕುಮಾರ್ ಅವರಿಗೆ 2017ರ ದಸರಾ ಕ್ರೀಡಾಕೂಟದ ಉದ್ಘಾಟನೆ ವೇಳೆ ಅಂದಿನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಘೋಷಿಸಿದ ₹ 10 ಲಕ್ಷ ನಗದು ಇಂದಿಗೂ ಅವರ ಕೈಸೇರದ ವಿಚಾರ ವರದಿಯಾಗಿದೆ (ಪ್ರ.ವಾ., ಆ. 29).

ಮಂತ್ರಿಗಳು ಪ್ರಚಾರದ ಸಲುವಾಗಿ ಇಂತಹ ಘೋಷಣೆಗಳನ್ನು ಮಾಡಿ ನಂತರ ಮರೆತುಬಿಡುತ್ತಾರೆ. ಆದರೆ ಅದನ್ನೇ ನಂಬಿಕೊಂಡು ತಮ್ಮ ಕ್ರೀಡಾ ಚಟುವಟಿಕೆ
ಗಳನ್ನು ಮುಂದುವರಿಸಲು ಉತ್ಸುಕರಾಗುವ ಕ್ರೀಡಾಪಟುಗಳು ನಿರಾಶರಾಗಿ ಅಲ್ಲಿಗೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವ ಸಂಭವ ಇರುತ್ತದೆ. ಹೀಗೆ ಘೋಷಿಸಿದ ಬಹುಮಾನವು ಸಂಬಂಧಪಟ್ಟವರ ಕೈಸೇರುವಂತೆ ಇನ್ನಾದರೂ ಆಡಳಿತವು ಕ್ರಮ ತೆಗೆದುಕೊಳ್ಳಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)