ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ: ಯೋಚನೆ ಬದಲಾಗಲಿ

Last Updated 4 ಜೂನ್ 2019, 17:27 IST
ಅಕ್ಷರ ಗಾತ್ರ

ಸರ್ಕಾರಿ ಅಧಿಕಾರಿಗಳ ಮೂಗಿನಡಿಯೇ ಬಾಲ್ಯ ವಿವಾಹಗಳು ನಡೆಯುತ್ತಿರುವುದು (ಪ್ರ.ವಾ., ಜೂನ್‌ 4) ಆಘಾತಕಾರಿ. ಆಟ ಆಡಿಕೊಂಡು ಶಿಕ್ಷಣ ಪಡೆಯಬೇಕಾದ ಹೊತ್ತಿನಲ್ಲಿ ಇಲ್ಲದ ಹೊರೆಯನ್ನು ಹೊರುವ ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು. ಏನೂ ಅರಿಯದ ಸಣ್ಣ ಪ್ರಾಯದಲ್ಲಿ ಮದುವೆಯಾಗಿ, ಮಕ್ಕಳನ್ನು ಹೆರುವುದು ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಗಂಡನನ್ನು ಕಳೆದುಕೊಂಡರಂತೂ ಆ ಹೆಣ್ಣು ವಿಧವೆ ಎನ್ನುವ ಪಟ್ಟ ಹೊತ್ತು, ಕೆಲವೊಮ್ಮೆ ದೌರ್ಜನ್ಯಗಳಿಗೂ ತುತ್ತಾಗುತ್ತಾಳೆ. ಬಾಲ್ಯವಿವಾಹದ ಪಿಡುಗನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜನರ ಯೋಚನೆಗಳೂ ಬದಲಾಗಬೇಕಿದೆ.

- ವಿಜಿತ,ಬಂಟ್ವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT