ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯಸಹಜ ಕುತೂಹಲ ಕಮರಿದೆ

Last Updated 14 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

‘ಮಕ್ಕಳ ನಡೆ: ವ್ಯವಸ್ಥೆ ಎಡವುತ್ತಿರುವುದೆಲ್ಲಿ?’ ಎಂಬ ಆರತಿ ಪಟ್ರಮೆ ಅವರ ಲೇಖನ (ಸಂಗತ, ಅ.3) ನನ್ನ ಮನಸ್ಸಿನಲ್ಲಿ ಇದ್ದಂತಹ ವಿಚಾರಗಳಿಗೆ ಮೂರ್ತರೂಪ ನೀಡಿದೆ. ಈಗಿನ ಮಕ್ಕಳು ಫೇಸ್‌ಬುಕ್, ಯೂಟ್ಯೂಬ್‌ಗೆ ಅಂಟಿಕೊಂಡು ಕ್ರಿಯಾಶೀಲ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ.

ಬಾಲ್ಯಸಹಜವಾದ ಕುತೂಹಲಗಳಾಗಲೀ ಆಟಗಳನ್ನಾಗಲೀ ಅವರಿಂದ ನಿರೀಕ್ಷಿಸುವಂತೆಯೇ ಇಲ್ಲ. ಇನ್ನು ಈಗಿನ ಯುವಜನರು ಕೌಟುಂಬಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಂತಿದೆ. ಹಲವರ ಮನೆಗಳಲ್ಲಿ ಹಿರಿಯ ಜೀವಗಳ ಬಗ್ಗೆ ಗೌರವವನ್ನಾಗಲೀ ಪ್ರೀತಿಯನ್ನಾಗಲೀ ತೋರುವ ಮಾತೇ ಇಲ್ಲ. ಇಂತಹ ವಾತಾವರಣ ರೂಪುಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ.

ಶಾಲೆಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ಮಕ್ಕಳು ಹಾಗೂ ಪೋಷಕರಿಗೆ ನೀತಿಪಾಠ ಹೇಳುವ ಮೂಲಕ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ.

– ಉಮಾದೇವಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT