ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಸಮಯ ಹೊಂದಿಸಿಕೊಳ್ಳಿ

Last Updated 6 ಅಕ್ಟೋಬರ್ 2022, 17:41 IST
ಅಕ್ಷರ ಗಾತ್ರ

ಕೊರೊನಾ ಕಾರಣದಿಂದ ಆನ್‌ಲೈನ್‌ ಪಾಠ ಆಲಿಸಲು ಮಕ್ಕಳು ಮೊಬೈಲ್‌ ಫೋನ್‌ ಬಳಸುವುದನ್ನು ರೂಢಿಸಿ ಕೊಂಡರು. ಅದು ಗೀಳಾಗಿ ಪರಿವರ್ತನೆ ಆಗಿದೆ ಎಂಬ ಅಳಲು ಅನೇಕ ಪೋಷಕರದು. ಈ ಗೀಳಿನಿಂದ ಮಕ್ಕಳನ್ನು ಹೊರತರುವ ಸವಾಲು ತಂದೆ–ತಾಯಿ ಎದುರಿಗಿದೆ. ಮಕ್ಕಳಿಗಾಗಿ ಸಮಯ ಹೊಂದಿಸಿಕೊಂಡು, ಆಟೋಟಗಳಿಗೆ ಅವರನ್ನು ಅನುವಾಗಿಸುವ ಮೂಲಕ ಅದನ್ನು ಮಾಡಬೇಕಿದೆ.

ಕೊರಗುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮಕ್ಕಳ ಆಸಕ್ತಿ– ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಓದು, ಸಿನಿಮಾ–ನಾಟಕ ವೀಕ್ಷಣೆ, ಕೇರಂ, ಚೆಸ್‌, ಚಾರಣದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವರನ್ನು ಹುರಿದುಂಬಿಸಬೇಕು. ಓರಗೆಯ ಮಕ್ಕಳ ಜತೆ ಒಡನಾಡಲು ಬಿಡಬೇಕು. ಸಾಧ್ಯವಾದರೆ ಅಕ್ಕಪಕ್ಕದ ಮನೆಗಳಲ್ಲಿನ ಮಕ್ಕಳನ್ನೂ ಸೇರಿಸಿಕೊಂಡು ಆಟಗಳನ್ನು ಆಡಬಹುದು.

→ಮಾನಸಾ ಎಂ.ಎನ್‌.,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT