ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ಹರಿಕಾರರು ಕಣ್ಣಿಗೆ ಬೀಳಲಿ

Last Updated 11 ನವೆಂಬರ್ 2019, 19:42 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆಯಲ್ಲಿ ಕುರಿಗಾಹಿ ಹುಡುಗ ಹಾಗೂ ಎಂ.ಎ. ಓದುತ್ತಿರುವ ಹುಡುಗಿ ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಷಯ ಇಟ್ಟುಕೊಂಡು ಗಂಟೆಗಟ್ಟಲೆ ಚರ್ಚಿಸುವ, ‘ನಿಮ್ಮಿಬ್ಬರಲ್ಲಿ ಪ್ರೀತಿ ಹೇಗೆ ಉಂಟಾಯಿತು, ನಿನಗೆ ಕುರಿಗಾಹಿಯನ್ನು ಪ್ರೀತಿಸಲು ಮನಸ್ಸು ಹೇಗೆ
ಬಂತು’ ಎಂಬಂಥ ಬಾಲಿಶ ಪ್ರಶ್ನೆಗಳನ್ನು ದೃಶ್ಯಮಾಧ್ಯಮದಲ್ಲಿ ಕೇಳುತ್ತಿದ್ದುದನ್ನು ನೋಡಿ ಬೇಸರವಾಯಿತು.

ತಾನ್ಯಾಕೆ ಅವನನ್ನು ವರಿಸಿದ್ದು ಎಂದು ಹುಡುಗಿ ಸ್ಪಷ್ಟವಾಗಿ ಹೇಳಿದರೂ ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳುವ ಔಚಿತ್ಯವೇನು ಎನಿಸಿತು. ಯಾವ ಪ್ರಚಾರವನ್ನೂ ಬಯಸದೆ ಜನಮುಖಿ ಕಾರ್ಯದಲ್ಲಿ ತೊಡಗಿರುವವರು ಇವರಿಗೆ ಕಾಣುವುದಿಲ್ಲವೇ? ಸರ್ಕಾರಿ ಶಾಲೆಗಳಲ್ಲಿ ಸದ್ದಿಲ್ಲದೇ ಬದಲಾವಣೆ ತರುತ್ತಿರುವ ಶಿಕ್ಷಕರ ಕಾರ್ಯಗಳು ಇವರ ಕಣ್ಣಿಗೆ ಬೀಳುವುದಿಲ್ಲವೇಕೆ?

–ಮಲ್ಲಪ್ಪ ಫ. ಕರೇಣ್ಣನವರ ಹನುಮಾಪುರ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT