ಸೋಮವಾರ, ಫೆಬ್ರವರಿ 17, 2020
16 °C

ಅಹಿಂಸೆಯನ್ನು ಅಣಕಿಸುವ ಮನಃಸ್ಥಿತಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ಇತ್ತೀಚೆಗೆ ಮೆರವಣಿಗೆ ಹೊರಟಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಯುವಕನೊಬ್ಬ ಪೊಲೀಸರ ಮುಂದೆಯೇ ಗುಂಡು ಹಾರಿಸಿ, ವಿದ್ಯಾರ್ಥಿಯೊಬ್ಬನನ್ನು ಗಾಯಗೊಳಿಸಿದ ಸುದ್ದಿ (ಪ್ರ.ವಾ., ಜ. 31) ಓದಿ ಆಘಾತವಾಯಿತು. ಇದಕ್ಕೆ ಪ್ರಭುತ್ವದ ಕುಮ್ಮಕ್ಕಿದೆಯೇ ಎನ್ನುವ ಅನುಮಾನ ಕಾಡಿತು. ‘ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಸಂದೇಶದೊಂದಿಗೆ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿದ ಆತನ ಮನಃಸ್ಥಿತಿಯು ಗಾಂಧೀಜಿಯ ಅಹಿಂಸಾ ತತ್ವವನ್ನು ಅಣಕಿಸುವಂತಿದೆ.

ಯುವಜನರ ದಾರಿ ತಪ್ಪಿಸಿ ಪಕ್ಷಪ್ರೇಮ, ಕೋಮು ದ್ವೇಷವನ್ನು ಅವರಲ್ಲಿ ತುಂಬಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಸಮಯ ಕೈ ಮೀರುವುದಕ್ಕೂ ಮುನ್ನ ಎಚ್ಚೆತ್ತು ಈಗಿನ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿದೆ. ಪೊಲೀಸ್‌ ಇಲಾಖೆಗೆ ಈ ಶಕ್ತಿ ಇದೆ. ಆದರೆ ಅದು ಬೆದರಿಕೆ ಅಥವಾ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಿದರೆ ಮಾತ್ರ ಇದು ಸಾಧ್ಯ.

- ಹರೀಶ್ ಕಮ್ಮನಕೋಟೆ, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)