ಬಯೋಮೆಡ್ ಕಂಪನಿ ಮುಚ್ಚಿಸಿ

7

ಬಯೋಮೆಡ್ ಕಂಪನಿ ಮುಚ್ಚಿಸಿ

Published:
Updated:

ಉತ್ತರ ಪ್ರದೇಶದ ಗಾಜಿಯಾಬಾದ್‌ ಮೂಲದ ಬಯೋಮೆಡ್ ಕಂಪನಿಯು ಉತ್ಪಾದಿಸುವ ಪೋಲಿಯೊ ಲಸಿಕೆಯಲ್ಲಿಯೇ ಪೋಲಿಯೊ ರೋಗಕ್ಕೆ ಕಾರಣವಾಗಿರುವ ಪೋಲಿಯೊ ಟೈಪ್-2 ವೈರಾಣು ಪತ್ತೆಯಾಗಿರುವುದು ಆಘಾತಕಾರಿ ವಿಷಯ.

ಪಲ್ಸ್ ಪೋಲಿಯೊ ಅಭಿಯಾನದಿಂದ ದೇಶದಲ್ಲಿ ಪೋಲಿಯೊ ರೋಗವು ಬಹುತೇಕ ನಿರ್ಮೂಲನೆಯಾದರೂ ಈ ರೋಗ ಮುಂದೆಂದೂ ಬಾರದಿರಲಿ ಎಂಬ ಉದ್ದೇಶದಿಂದ ವರ್ಷದಲ್ಲಿ ಎರಡು ಬಾರಿ ಲಸಿಕೆ ಅಭಿಯಾನ ಮುಂದುವರಿಸಲಾಗಿದೆ. ಇದೀಗ ಲಸಿಕೆಯಲ್ಲಿಯೇ ವೈರಾಣು ಪತ್ತೆಯಾಗಿರುವುದರಿಂದ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರು ಹಿಂದೇಟು ಹಾಕುವ ಸಾಧ್ಯತೆ ಇದೆ.

ಪೋಲಿಯೊ ನಿರ್ಮೂಲನೆಯಲ್ಲಿ ಯಶಸ್ವಿಯಾದ ಭಾರತದ ಆಂದೋಲನಕ್ಕೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಬಯೋಮೆಡ್ ಕಂಪನಿಯಿಂದ ಈ ಅಭಿಯಾನಕ್ಕೆ ಕಪ್ಪು ಮಸಿ ಬಳಿದಂತಾಗಿದೆ.

ಪಂಪಾಪತಿ ಹಿರೇಮಠ, ಧಾರವಾಡ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !