ಶುಕ್ರವಾರ, ಅಕ್ಟೋಬರ್ 18, 2019
20 °C

ಬಟ್ಟೆಯ ಬ್ಯಾಗ್‌ ಬಳಸೋಣ

Published:
Updated:

ಗಾಂಧೀಜಿಯವರ 150ನೇ ಜನ್ಮದಿನದ ಸಂದರ್ಭದಲ್ಲಿ, ಒಂದೇ ಬಾರಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ನಿಷೇಧಕ್ಕೆ ಕರೆ ಕೊಟ್ಟಿರುವ ಪ್ರಧಾನಿ ಅಭಿನಂದನಾರ್ಹರು.

ಪ್ಲಾಸ್ಟಿಕ್, ಪರಿಸರಕ್ಕೆ ಮಾರಕ ಎಂದು ತಿಳಿದಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ನಾವು ಬಳಸುವುದರಿಂದ ಅದು ಪ್ರಾಣಿ ಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ. ಆದ್ದರಿಂದ ಸಂಪೂರ್ಣವಾಗಿ ಅದನ್ನು ನಿಯಂತ್ರಿಸಬೇಕು.

ದಶಕದ ಹಿಂದೆ ನಾವು ಅಂಗಡಿ, ಸಂತೆಗೆ ಹೋಗುವಾಗ ಬಟ್ಟೆಯ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಈಗ ಎಲ್ಲೆಂದರಲ್ಲಿ ಸುಲಭವಾಗಿ ಪ್ಲಾಸ್ಟಿಕ್‌ ದೊರೆಯುವುದರಿಂದ ಆ ಪದ್ಧತಿ ಮರೆಯಾಗಿದೆ. ಮತ್ತೆ ಹಿಂದಿನ ರೂಢಿಯನ್ನೇ ಅನುಸರಿಸಿ, ಪ್ಲಾಸ್ಟಿಕ್‌ ಬಳಕೆಯನ್ನು ತಗ್ಗಿಸಲು ಇದು ಸಕಾಲ.

– ಸುದರ್ಶನ್ ಎಚ್.ಎನ್, ಹೆತ್ತೂರು, ಹಾಸನ

Post Comments (+)