ಶನಿವಾರ, ಮಾರ್ಚ್ 25, 2023
27 °C

ದೇವರ ಕೆಲಸ!

ಪ್ರೊ. ಆರ್.ವಿ. ಹೊರಡಿ - ಧಾರವಾಡ Updated:

ಅಕ್ಷರ ಗಾತ್ರ : | |

ನಮ್ಮ ವಿಧಾನಸೌಧವು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ತಲೆಬರಹವನ್ನು ಹೊತ್ತು ಕಂಗೊಳಿಸುತ್ತಿದೆ. ನೂರು ದಿನ ಮುಖ್ಯಮಂತ್ರಿಯಾಗಿ ಮುಂದುವರಿದದ್ದೇ ಒಂದು ‘ಮಹಾ ಸಾಧನೆ’ ಎಂಬಂತೆ ಮುಖ್ಯಮಂತ್ರಿಯ ಅಭಿಮಾನಿಗಳು ‘ಕುಮಾರ ಶತಕ’ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಎಂಥ ಜನ!

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಇಲ್ಲಿಯವರೆಗೆ ಹತ್ತಾರು ಗುಡಿ, ಗುಂಡಾರ, ದೇವಾಯಲಯಗಳನ್ನು ಸುತ್ತಿ, ಸರ್ಕಾರಿ ಖರ್ಚಿನಲ್ಲಿ ಪೂಜೆ, ಪುನಸ್ಕಾರ, ಯಜ್ಞ, ಯಾಗ, ಹವನಗಳನ್ನು ಮಾಡಿದ್ದೇ ಮುಖ್ಯಮಂತ್ರಿಯವರ ಜನಸೇವೆಯ ಮಾದರಿ. ಸರ್ಕಾರದ ನೂರು ದಿನಗಳ ಸಾಧನೆಯಲ್ಲಿ ‘ದೇವರ ಕೆಲಸ’ವೇ ಹೆಚ್ಚಾಗಿ ಕಾಣಿಸುತ್ತಿದೆ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು