ಮಂಗಳವಾರ, ಅಕ್ಟೋಬರ್ 22, 2019
21 °C

‘ದೇವರಿಲ್ಲ ಎನ್ನುವುದು ದಾರ್ಷ್ಟ್ಯದ  ಮಾತಾಗುತ್ತದೆ’ | ಎಲ್ಲಿಗೆಲ್ಲಿಯ ಸಂಬಂಧ?

Published:
Updated:

‘ದೇವರಿಲ್ಲ ಎನ್ನುವುದು ದಾರ್ಷ್ಟ್ಯದ  ಮಾತಾಗುತ್ತದೆ’ ಎಂದು ಹಿರಿಯರೂ, ಪ್ರಾಜ್ಞರೂ ಆದ 
ಎಸ್.ಎಲ್.ಭೈರಪ್ಪನವರು ಈ ಸಲದ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದ್ದಾರೆ (ಪ್ರ.ವಾ., ಸೆ. 30). ದೇವರ ಅಸ್ತಿತ್ವವನ್ನು ಒಪ್ಪುವುದು, ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಸಾಮಾನ್ಯರನ್ನು ಬಿಡಿ, ಶಿವರಾಮ ಕಾರಂತ, ಎ.ಎನ್.ಮೂರ್ತಿರಾವ್ ಮತ್ತು ಗೌರೀಶ ಕಾಯ್ಕಿಣಿ ಅಂಥವರೂ ದೇವರಿಲ್ಲ ಎಂದು ದೃಢವಾಗಿ ನಂಬಿದ್ದರು. ಆದರೂ ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಬಾಳನ್ನು ಬಾಳಿ, ಕನ್ನಡ ಜನಮಾನಸದಲ್ಲಿ ಪ್ರೀತಿಯ ಸ್ಥಾನವನ್ನು ಗಳಿಸಿದ್ದಾರೆ. ದೇವರಿದ್ದಾನೆ ಅಥವಾ ಇಲ್ಲ ಎಂದು ಹೇಳುವುದಕ್ಕೂ ದಾರ್ಷ್ಟ್ಯತನಕ್ಕೂ ಎಲ್ಲಿಯ ಸಂಬಂಧ?

–ಪ್ರಾಣೇಶ ಗುಡಿ, ಬೆಂಗಳೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)