ಶುಕ್ರವಾರ, ಫೆಬ್ರವರಿ 28, 2020
19 °C

ಹಾವೇರಿಯಲ್ಲಿ ಸಮ್ಮೇಳನ: ಸ್ವಾಗತಾರ್ಹ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಅಖಂಡ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ, ರಾಜ್ಯದ ವಿವಿಧ ಭಾಗಗಳಿಂದ ಬರುವ ಸಾಹಿತ್ಯಪ್ರೇಮಿಗಳಿಗೆ ಅನುಕೂಲಕರವಾದ ಸ್ಥಳ. ಮೇಲಾಗಿ ಈ ಜಿಲ್ಲೆಯು ಕವಿ ಸರ್ವಜ್ಞ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ, ಸಂತಶಿಶುನಾಳ ಶರೀಷ, ಗಳಗನಾಥ, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಹೀಗೆ ಸಾಲು ಸಾಲು ಪುಣ್ಯವಂತರಿಗೆ ಜನ್ಮ ನೀಡಿದ ನೆಲ. ಇಲ್ಲಿ ಸಮ್ಮೇಳನದ ವಿವಿಧ ಗೋಷ್ಠಿಗಳು ನಡೆಯುವಾಗ, ಈ ನೆಲದ ಗಣ್ಯರನ್ನು ಸ್ಮರಿಸಲು ಮತ್ತೊಂದು ಅವಕಾಶ ದೊರೆಯುತ್ತದೆ ಮತ್ತು ಅಖಂಡ ಕರ್ನಾಟಕದ ಬೇರು ಮತ್ತಷ್ಟು ಆಳಕ್ಕೆ ಇಳಿಯುತ್ತದೆ.

ಗಣಪತಿ ನಾಯ್ಕ, ಕಾನಗೋಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)