ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ವಿರೋಧಿ

Last Updated 11 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಲಿಂಗಾಯತ ಸಮಾವೇಶದಲ್ಲಿ ಮಾತೆ ಮಹಾದೇವಿ ಅವರು ‘ಲಿಂಗಾಯತರಿಗೆ ಪ್ರತ್ಯೇಕ ಪಕ್ಷದ ಅಗತ್ಯವಿದೆ’ ಎಂದು ಹೇಳಿರುವುದು (ಪ್ರ.ವಾ., ಡಿ. 11) ಖಂಡನೀಯ.

12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತೀಯತೆ ಹೋಗಲಾಡಿಸಲು ಇವತ್ತಿನ ಸಂಸತ್ ಮಾದರಿಯ ‘ಅನುಭವ ಮಂಟಪ’ವನ್ನು ಸ್ಥಾಪಿಸಿದ್ದರು. ಶರಣರ ಇಂಥ ಆದರ್ಶಗಳನ್ನು ಪ್ರಚಾರ ಮಾಡಬೇಕಾದ ಮಾತೆ ಅವರು, ಅವರ ಆದರ್ಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಅವರ ಮಾತಿನಿಂದ ಮೂಡುತ್ತಿದೆ. ಇವರ ಹೇಳಿಕೆಯು ಭಾರತ ಸಂವಿಧಾನದ ಮೂಲ ಆಶಯವಾದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ.

ಪ್ರತೀ ಜಾತಿ ಹಾಗೂ ಧರ್ಮದವರು ಪ್ರತ್ಯೇಕ ಪಕ್ಷ ಕಟ್ಟುತ್ತಾ ಹೋದರೆ ಪ್ರಜಾಪ್ರಭುತ್ವದ ಮೌಲ್ಯ ಹಾಳಾಗದೆ ಇರದು.

ನಿರಂಜನ್ ಕಾಳಗಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT