ಬುಧವಾರ, ಅಕ್ಟೋಬರ್ 28, 2020
23 °C

ವಾಚಕರ ವಾಣಿ: ಸಾವಿನ ಮನೆಯಲ್ಲೂ ಲಂಚಾವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ನನ್ನ ಆತ್ಮೀಯರೊಬ್ಬರು ಕೋವಿಡ್‌ ರೋಗದಿಂದ ತೀರಿಕೊಂಡರು. ಆಗ ನನಗೆ, ಇಲ್ಲಿರುವ ಭ್ರಷ್ಟಾಚಾರದ ಕೊಳಕು ವ್ಯವಸ್ಥೆಯ ನೇರ ಪರಿಚಯವಾಯಿತು. ಅಂತ್ಯಕ್ರಿಯೆ, ಮರಣ ಪ್ರಮಾಣಪತ್ರ, ಸಂಬಂಧಿಕರ ಕೋವಿಡ್ ಪರೀಕ್ಷೆ ಎಲ್ಲದಕ್ಕೂ ಲಂಚ ಲಂಚ ಲಂಚ! ಲಂಚವಿಲ್ಲದೆ ಏನೂ ನಡೆಯದು.

ಸಾವಿನ ಮನೆಯಲ್ಲೂ ‘ಇಷ್ಟು ಕೊಡಿ’ ಎಂದು ಬಾಯಿಬಿಟ್ಟು ಕೇಳುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆಲವು ‘ವಾರಿಯರ್‌’ಗಳು! ಇವರಿಗೇನಾ ನಾವು ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಧನ್ಯವಾದ ಅರ್ಪಿಸಿದ್ದು ಎನಿಸಿ ಜುಗುಪ್ಸೆ, ನೋವು, ಅಸಹ್ಯ ಎಲ್ಲವೂ ಒಟ್ಟಿಗೆ ಉಂಟಾದವು.

–ಶಿವಪ್ರಕಾಶ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು