ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕಾರ್ಮಿಕರು ವಸ್ತುಗಳೇ?

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಲಖನೌನಲ್ಲಿ ಕೂಲಿಕಾರ್ಮಿಕರ ಮೇಲೆ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸಿರುವುದು ಆಘಾತಕಾರಿ. ಸಂವೇದನೆ ಕಳೆದುಕೊಂಡ ಆಡಳಿತವು ಕೂಲಿಕಾರ್ಮಿಕರನ್ನು ‘ವಸ್ತು’ಗಳೆಂದು ಪರಿಭಾವಿಸಿರುವಂತಿದೆ. ಬಟ್ಟೆ ಮತ್ತು ಕಾಗದದ ಕೈಗಾರಿಕೆಗಳಲ್ಲಿ ಬ್ಲೀಚಿಂಗ್‌ಗಾಗಿ ಬಳಸುವ ಈ ರಾಸಾಯನಿಕವು ಮಾನವ ದೇಹದ ಸಂಪರ್ಕಕ್ಕೆ ಬಂದರೆ ಕಣ್ಣು, ಚರ್ಮ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅತ್ಯಂತ ಅಮಾನವೀಯವಾದ ಈ ಘಟನೆಗೆ ಯಾರು ಹೊಣೆ?

-ತಾಂಡವಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT