ಶುಕ್ರವಾರ, ಜೂನ್ 18, 2021
24 °C

ಚಾಲಕರಿಗೆ ಪರಿಹಾರ: ಲೋಪ ಸರಿಯಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ವಿಶೇಷ ಆರ್ಥಿಕ ಪ್ಯಾಕೇಜ್‌ನ ಅಡಿ ವಾಹನ ಚಾಲಕರ ಖಾತೆಗೆ ತಲಾ ₹ 3 ಸಾವಿರ ಹಾಕುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಸರಿಯಾದ ಖಾತೆದಾರರನ್ನು ಹುಡುಕಿ ಅವರ ಖಾತೆಗೆ ಹಣ ಹಾಕುವುದಾಗಿ ಸರ್ಕಾರ ಹೇಳಿದ್ದರೂ ಆ ಹಣ ಫಲಾನುಭವಿಗಳನ್ನು ತಲುಪದೇ ಇರುವ ಸಾಧ್ಯತೆಯೇ ಹೆಚ್ಚು. ವಾಹನ ಒಬ್ಬರದಾದರೆ ಅದರ ಚಾಲಕ ಬೇರೆಯಾಗಿರುತ್ತಾರೆ. ಹಾಗಾಗಿ ವಾಹನದ ನೋಂದಣಿ ಮೂಲಕ ಹಣದ ಬಟವಾಡೆ ಮಾಡಿದರೆ ಅದು ಚಾಲಕರ ಬದಲಿಗೆ ವಾಹನ ಮಾಲೀಕರ ಖಾತೆಗೆ ಜಮೆಯಾಗುತ್ತದೆ. ಆದ್ದರಿಂದ ಸರಿಯಾಗಿ ಪರೀಕ್ಷಿಸಿ ಜಮಾ ಮಾಡುವುದು ಒಳ್ಳೆಯದು. ಈ ಕಾರ್ಯದ ಪರಿಶೀಲನೆಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಿದರೆ ಯೋಜನೆಯ ಫಲ ಸಿಗಬೇಕಾದವರಿಗೆ ಸಿಕ್ಕೀತು. 

– ಬಾಲಕೃಷ್ಣ ಎಂ.ಆರ್., ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.