ಬುಧವಾರ, ಜುಲೈ 28, 2021
21 °C

ವಾಚಕರ ವಾಣಿ: ಯುವಕರ ವಿಷಯದಲ್ಲಿ ತಾತ್ಸಾರ ಬೇಡ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಯುವಜನರೇ ಹೆಚ್ಚು ಬಾಧಿತರಾಗಿದ್ದರ ಕುರಿತ ವರದಿ (ಪ್ರ.ವಾ., ಜೂನ್‌ 24) ಸಕಾಲಿಕವಾಗಿದೆ. ಕೋವಿಡ್ ಎರಡನೇ ಅಲೆ ಹೆಚ್ಚಾಗಿ ಯುವಜನರನ್ನೇ ಬಾಧಿಸಲು ಯುವಜನರ ಓಡಾಟ, ಕ್ಷೇತ್ರಕಾರ್ಯ ಎಷ್ಟು ಕಾರಣವೋ ಅದಕ್ಕಿಂತ ಹೆಚ್ಚು ಅವರ ಆರೋಗ್ಯದ ಕುರಿತು ಸರ್ಕಾರಕ್ಕೆ ಇರುವ ಮನೋಭಾವ ಕಾರಣ. ಅದೇ ಮನೋಭಾವವೇ ಯುವಜನರಿಗೆ ವಯಸ್ಸಿನ ಕಾರಣಕ್ಕೆ ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡಲು ಕಾರಣವಾಯಿತು.

‘ಯುವಜನರು ದೇಶದ ಭವಿಷ್ಯ’ ಎಂದು ರಾಜಕೀಯ ಭಾಷಣಗಳಲ್ಲಿ ಹೇಳುವ ರಾಜಕೀಯ ನಾಯಕರು, ಪ್ರತಿವರ್ಷ ಬಜೆಟ್‌ನಲ್ಲಿ ಯುವಜನರಿಗೆ, ಅವರ ಆರೋಗ್ಯಕ್ಕೆ ಎಷ್ಟು ಹಣ ಮೀಸಲು ಇಟ್ಟಿದ್ದೇವೆ, ಮೀಸಲು ಇಟ್ಟ ಅಲ್ಪಸ್ವಲ್ಪ ಹಣವನ್ನು ಎಷ್ಟರಮಟ್ಟಿಗೆ ಬಳಸಿದ್ದೇವೆ, ಹೇಗೆ ಬಳಸಿದ್ದೇವೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಲಸಿಕೆ ವಿತರಣೆಯಲ್ಲಿನ ವಯಸ್ಸಿನ ತಾರತಮ್ಯ ಮತ್ತು ಯುವಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಎಂಬ ತಾತ್ಸಾರ ಮನೋಭಾವವೇ ಇಂದಿನ ಈ ಪರಿಸ್ಥಿತಿಗೆ ಕಾರಣ. ಇನ್ನು ಮುಂದೆಯಾದರೂ ಈ ಮನೋಭಾವ ಬದಲಾಗಲಿ. ಯುವಜನರ ಅಭಿವೃದ್ಧಿಗೆ, ಅವರ ಆರೋಗ್ಯದ ರಕ್ಷಣೆಗೆ ಹೆಚ್ಚು ಗಮನ ಮತ್ತು ಅನುದಾನ ನೀಡಲಿ.

- ನಂದನ್ ಖಂಡೇನಹಳ್ಳಿ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.