‘ಕ್ಲೀಷೆ’ ಎಂಬ ಕ್ಲೀಷೆ!

7

‘ಕ್ಲೀಷೆ’ ಎಂಬ ಕ್ಲೀಷೆ!

Published:
Updated:

ನಮ್ಮ ವಿಮರ್ಶಕರು ಮತ್ತು ಭಾಷಣಕಾರರು ‘ಕ್ಲೀಷೆ’ ಎಂಬ ಕ್ಲಿಷ್ಟ ಪದವನ್ನು ಪ್ರಯೋಗಿಸುವುದರ ಮೂಲಕ ಸಾಮಾನ್ಯ ಓದುಗರನ್ನು ಮತ್ತು ಕೇಳುಗರನ್ನು ಗೊಂದಲದಲ್ಲಿ ಕೆಡವುತ್ತಿದ್ದಾರೆ! ಅಸಲಿಗೆ ‘ಕ್ಲೀಷೆ’ಯು ಕನ್ನಡದ ಪದವೇ ಅಲ್ಲ! cliche ಎಂಬ ಇಂಗ್ಲಿಷ್ ಪದವಿದ್ದು, ಆ ಪದಕ್ಕೆ ‘ಹಳಸಲು ನುಡಿ; ಸವಕಲು ಮಾತು; ಚರ್ವಿತ ಚರ್ವಣ; ಬಳಸಿ ಬಳಸಿ ಹಳತಾದ ಮಾತು ಯಾ ಅಭಿಪ್ರಾಯ; ನಕಲಚ್ಚಿನ ತಗಡು’ ಮುಂತಾದ ಅರ್ಥಗಳಿವೆ. ಅದೇ ಪದವನ್ನು ಹ್ರಸ್ವಗೊಳಿಸಿ ಕನ್ನಡ ಪದವಾಗಿ(ಸಿ) ನಮ್ಮ ವಿಮರ್ಶಕರು ಮೇಲ್ಕಂಡ ಅರ್ಥಗಳಲ್ಲೇ ಚಾಲ್ತಿಗೆ ತಂದರು.

ನೇರ ಅರ್ಥದಲ್ಲೂ ರೂಪಕವಾಗಿಯೂ ‘ಕ್ಲೀಷೆ’ಯು ಕನ್ನಡ ಪದವೇ ಆಗಿ ಬಳಕೆಯಲ್ಲಿರುವುದು ಸ್ವಾಗತಾರ್ಹವೇ. ಆದರೆ, ಈಚೆಗೆ ಬರಹಗಳಲ್ಲೂ ಭಾಷಣಗಳಲ್ಲೂ ಈ ಪದವು ಸ್ವಯಂ ಕ್ಲೀಷೆಯೆನ್ನಿಸುವಷ್ಟು ಬಳಕೆಯಾಗುತ್ತಿದೆಯಲ್ಲದೆ ಈ ಪದದ ಅರ್ಥವನ್ನಾಗಲೀ ಔಚಿತ್ಯವನ್ನಾಗಲೀ ಅರಿಯದೆಯೇ ಬಳಸುವ ‘ಘನಪಂಡಿತ’ರ ಸಂಖ್ಯೆಯೂ ಹೆಚ್ಚಾಗುತ್ತಿದೆ! ಹೀಗಾದರೆ ‘ಪಾಮರ’ ಓದುಗರ ಮತ್ತು ಕೇಳುಗರ ಪಾಡೇನು?!

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !