ಗುರುವಾರ , ನವೆಂಬರ್ 21, 2019
27 °C

ಸಮಗ್ರ ತನಿಖೆಯಾಗಲಿ

Published:
Updated:

ಪರಿಶಿಷ್ಟ ಜಾತಿಯ ವಿಧವೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, ಅವರ ಜೀವನಮಟ್ಟ ಸುಧಾರಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರವು ವಿಧವಾ ವಿವಾಹ ನೆರವು ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಮಂದಿ ಈ ಸೌಲಭ್ಯ ಪಡೆದುಕೊಳ್ಳದಿರುವ ನೋವು ಒಂದೆಡೆಯಾದರೆ, ದಮನಿತರ ಪರವಾದ ಇಂತಹ ಯೋಜನೆಗಳು ದುರ್ಬಳಕೆಯಾಗುತ್ತಿರುವ ವರದಿ (ಪ್ರ.ವಾ., ಒಳನೋಟ, ಅ. 20) ನೋಡಿ ಮತ್ತಷ್ಟು ಆಘಾತವಾಯಿತು.

ದಲಿತರ ಉದ್ಧಾರಕ್ಕಾಗಿ ಜಾರಿಗೆ ಬಂದ ಮಹತ್ವಾಕಾಂಕ್ಷಿ ಯೋಜನೆಯನ್ನು ದಲಿತರೇ ಅಧಿಕಾರಿಗಳೊಟ್ಟಿಗೆ ಸೇರಿ ಹಳ್ಳ ಹಿಡಿಸಿದ್ದು ಬೇಸರದ ಸಂಗತಿ. ಹಣಕ್ಕಾಗಿ ಜನ ಯಾವ ಮಟ್ಟಕ್ಕಾದರೂ ಇಳಿಯಬಲ್ಲರು ಎಂಬುದಕ್ಕೆ ಈ ವಿದ್ಯಮಾನ ನಿದರ್ಶನ. ಜಾರಿಯಾದ ಯೋಜನೆಗಳು ಎಷ್ಟು ಪಾರದರ್ಶಕವಾಗಿ ಜನರನ್ನು ತಲುಪುತ್ತಿವೆ ಎಂಬ ಬಗ್ಗೆ ಗಮನಹರಿಸಬೇಕಾದುದು ಸರ್ಕಾರದ ಕರ್ತವ್ಯ.

- ನಾಗರಾಜ್ ಗರಗ್, ಹೊಸದುರ್ಗ

ಪ್ರತಿಕ್ರಿಯಿಸಿ (+)