ದಲಿತಪ್ರಜ್ಞೆ ಮುಖ್ಯ

7

ದಲಿತಪ್ರಜ್ಞೆ ಮುಖ್ಯ

Published:
Updated:

ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಎನ್. ಮಹೇಶ್‌ ಅವರು ಅಮ್ಮ ಭಗವಾನ್ ಅವರ ಪಾದುಕೆಗಳನ್ನು ಎದೆಗೆ ಅವಚಿಕೊಂಡದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡುತ್ತಾ, ಅಂಬೇಡ್ಕರ್‌ವಾದದ ಮೇಲಿನ ಅವರ ನಂಬಿಕೆಯನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದು ನಿಜಕ್ಕೂ ವಿಪರ್ಯಾಸ.

ಯಾವುದೇ ಕೋಮಿಗೆ ಸೇರಿದವನಾದರೂ ವ್ಯಕ್ತಿಯು ದಲಿತಪ್ರಜ್ಞೆ ಹೊಂದಿರುವುದು ಮುಖ್ಯ. ಅವನು ಅಂಬೇಡ್ಕರ್‌ವಾದಿಯಾಗಿದ್ದೂ ದಲಿತಪ್ರಜ್ಞೆ ಹೊಂದಿಲ್ಲದಿದ್ದರೆ ಅದು ಅಂಬೇಡ್ಕರ್ ವಿಚಾರಗಳಿಗೆ ಮಾಡುವ ಅಪಮಾನ. ಆಧುನಿಕ ಕನ್ನಡ ರಂಗಭೂಮಿಯ ಹಿರಿಯ ರಂಗ ಸಂಘಟಕ, ಎಡ ಸಿದ್ಧಾಂತದ ಪ್ರತಿಪಾದಕ ಪ್ರೊ. ಸಿ.ಜಿ.ಕೆ. ಅವರು ಭಾಷಣವೊಂದರಲ್ಲಿ, ತಾವು ದೇವಸ್ಥಾನದ ಕಲ್ಯಾಣಿ, ಊರ ಕೆರೆಗಳನ್ನು ಕಂಡಾಗ ಕೈಯಲ್ಲಿನ ಕಾಸನ್ನು ಎರಚುತ್ತಿದ್ದೆ, ಅದರರ್ಥ ಮೌಢ್ಯ ಅಲ್ಲ, ಅದೊಂದು ಅಭ್ಯಾಸ, ಮಾನಸಿಕ ಆಹ್ಲಾದ ಎಂದು ಅಭಿಪ್ರಾಯಪಟ್ಟಿದ್ದರು.

ವ್ಯಕ್ತಿಯ ನಂಬಿಕೆ ಹಾಗೂ ಆಚರಣೆಗಳು ಅವರ ಖಾಸಗಿ ವಿಚಾರ. ಹಾಗೆಂದು ಅಂಬೇಡ್ಕರ್ ಸಿದ್ಧಾಂತದ ಮೇಲಿನ ನಂಬಿಕೆಯನ್ನೇ ಪ್ರಶ್ನಿಸಿದರೆ ಅದು ಪೂರ್ವಗ್ರಹವಾದೀತು!

–ಆರ್. ವೆಂಕಟರಾಜು, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !