ಭಾನುವಾರ, ಫೆಬ್ರವರಿ 5, 2023
21 °C

ವ್ಯವಸ್ಥೆಯನ್ನು ಪ್ರಶ್ನಿಸಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಕ್ ಹಿಂದಿಕ್ಕಿದ ಕಾರಣಕ್ಕೆ ಪ್ರಬಲ ಜಾತಿಗೆ ಸೇರಿದ ಯುವಕರಿಂದ ಹಲ್ಲೆ, ಜಾತಿ ನಿಂದನೆಗೆ ಒಳಗಾದ ಕೋಲಾರ ಜಿಲ್ಲೆಯ ಒಬ್ಬ ದಲಿತ ಯುವಕ ಆತ್ಮಹತ್ಯೆಗೆ ಶರಣಾಗಿದ್ದು ಆಘಾತಕಾರಿ. ಆದರೆ ಈ ಪ್ರಕರಣದಲ್ಲಿ ಮೃತ ಯುವಕನ ಧೈರ್ಯ
ವನ್ನು ಪ್ರಶ್ನಿಸುವುದು ಉಚಿತವಲ್ಲ. ಆ ಯುವಕನಿಗೆ ಆದಂತಹ ಅವಮಾನವನ್ನು ನಮ್ಮಲ್ಲಿನ ಬಹುತೇಕರು ಅನುಭವಿಸಿ ರುವ ಸಾಧ್ಯತೆ ಕಡಿಮೆ. ಆತನ ನೋವು, ಹತಾಶೆಯ ತೀವ್ರತೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಆತ ಹೆದರಿದನೆಂದು ಭಾವಿಸುವುದು ಸರಿಯಲ್ಲ. ಮೃತ ಯುವಕ ಧೈರ್ಯವಂತ ಆಗಿದ್ದಿರಬಹುದು ಅಥವಾ
ಆಗಿಲ್ಲದೆಯೂ ಇರಬಹುದು. ಗೌರವಯುತವಾಗಿ ಬದುಕುವುದು ಆತನ ಹಕ್ಕಾಗಿತ್ತು. ಆ ಹಕ್ಕನ್ನು ಕಸಿದುಕೊಂಡಿದ್ದು ನಮ್ಮ ಸಮಾಜ. ದೂಷಿಸಬೇಕಿರುವುದು ನಮ್ಮ ಸಮಾಜವನ್ನೇ ವಿನಾ ಅದಕ್ಕೆ ಬಲಿಪಶುವಾದ ಯುವಕನನ್ನಲ್ಲ. 

-ಸುನೀಲ ನಾಯಕ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.