ಮಂಗಳವಾರ, ಅಕ್ಟೋಬರ್ 22, 2019
23 °C

ದಸರಾ: ಬೇಕಿದೆ ಅವಕಾಶ

Published:
Updated:

ಮೈಸೂರಿನ ದಸರಾ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ನಾಡಿನ ಪರಂಪರೆ, ಕಲೆ, ಸಾಂಸ್ಕೃತಿಕ ವೈಭವವು ಒಂಬತ್ತು ದಿನಗಳ ಕಾಲ ಅನಾವರಣಗೊಳ್ಳುತ್ತದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳಡಿ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಆದರೆ, ಈ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರದ ಕೊರತೆ ಎದ್ದು ಕಾಣುತ್ತದೆ. ಉತ್ತರ ಕರ್ನಾಟಕದ ಬಹುತೇಕ ಪ್ರತಿಭೆಗಳಿಗೆ ಪಾಲ್ಗೊಳ್ಳಲು ಅವಕಾಶವೇ ಸಿಗುವುದಿಲ್ಲ.

ಉತ್ಸವ ಸಮಿತಿಯ ಅಧಿಕೃತ ಜಾಲತಾಣದಲ್ಲೂ ಮುಂಚಿತವಾಗಿ ಪ್ರಕಟಣೆ ಮಾಡುವುದಿಲ್ಲ.‌ ಟಾರ್ಚ್‌ ಪೆರೇಡ್‌ನಂತಹ ಸುಂದರ ಕಾರ್ಯಕ್ರಮಕ್ಕೆ ಟಿಕೆಟ್ ಪಡೆದುಕೊಳ್ಳುವುದು ದೊಡ್ಡ ಸಾಹಸವೇ ಸರಿ. ಮೈಸೂರು ಭಾಗದ ರಾಜಕಾರಣಿಗಳು, ಉನ್ನತ ಸ್ಥಾನದಲ್ಲಿ ಇರುವವರು ಮೊದಲೇ ಲಾಬಿ ಮಾಡಿ ಎಲ್ಲ ಟಿಕೆಟ್‌ಗಳನ್ನೂ ಬುಕ್ ಮಾಡಿಕೊಂಡಿರುತ್ತಾರೆ. ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸುವುದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ, ವೇದಿಕೆ ದೊರಕಬೇಕು.

–ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)