ತುಂಗಾ ನದಿ ಒಡಲು; ದುಃಖದ ಕಡಲು

ಕಡಿಮೆ ಜನವಸತಿ ಇರುವ ಶೃಂಗೇರಿಯಂತಹ ಮಲೆನಾಡಿನ ಮಡಿಲಲ್ಲಿ ಹರಿಯುವ ತುಂಗಾ ನದಿ ಹೆಚ್ಚು ಕಲುಷಿತಗೊಂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಗೃಹಗಳು, ವಸತಿಗೃಹ, ಹೋಟೆಲ್, ಕೈಗಾರಿಕೆ, ಕೃಷಿ ತ್ಯಾಜ್ಯ ನದಿಯ
ಒಡಲು ಸೇರುತ್ತಿದೆ. ಚರಂಡಿ ನೀರನ್ನು ಸಂಸ್ಕರಿಸದೆ ನೇರವಾಗಿ ಹರಿಸಲಾಗು ತ್ತಿದೆ. ಈ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ನದಿಯ ನೈಸರ್ಗಿಕ ಪರಿಸರ ಹದಗೆಟ್ಟಿದೆ. ಮಾನವನ ಈ ಕೃತ್ಯದಿಂದ ಅದೆಷ್ಟೋ ಜಲಚರಗಳು ಮಲೆನಾಡಿನಿಂದ ಕಣ್ಮರೆಯಾಗಿವೆ. ಇನ್ನಾದರೂ ಎಚ್ಚತ್ತುಕೊಂಡು ಪರಿಸರಸ್ನೇಹಿಯಾಗಿ ವರ್ತಿಸಬೇಕಿದೆ. ಇಲ್ಲವಾದರೆ ಭವಿಷ್ಯ ದಲ್ಲಿ ಪ್ರಕೃತಿಯೇ ಮಲೆನಾಡಿಗರಿಗೆ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.

ಸಚಿನ್ ಹೊಳೆಹದ್ದು, ಶೃಂಗೇರಿಜನಗಣತಿಗೆ ಶಿಕ್ಷಕರ ಬಳಕೆ ನ್ಯಾಯಸಮ್ಮತವೆ?

ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಾರೆ. ಮೂಲಭೂತ ಹಕ್ಕಾದ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಶಿಕ್ಷಕರಿಗೆ ಸಕಲ ಸೌಕರ್ಯಗಳನ್ನೂ, ಸಮಯವನ್ನೂ, ಅವಕಾಶಗಳನ್ನೂ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಮಕ್ಕಳಿಗೆ ಪಾಠ ಮಾಡಬೇಕು, ಊಟ ನೀಡ ಬೇಕು, ಮನರಂಜನೆ ಒದಗಿಸಬೇಕು, ರಕ್ಷಣೆ ಕೊಟ್ಟು ಮಕ್ಕಳನ್ನು ಕಾಪಾಡಬೇಕು – ಇದೆಲ್ಲದಕ್ಕಾಗಿ ಸಕಲ ಸಿದ್ಧತೆಗಳನ್ನೂ ಅವರು ಮಾಡಿಕೊಳ್ಳಬೇಕು. ಈ ಶಿಕ್ಷಕರಿಗೆ ಪುರುಸೊತ್ತೆಲ್ಲಿದೆ? ಹೀಗಿರುವಾಗ ಸರ್ಕಾರ ಅವರ ಸಮಯ, ಪರಿಶ್ರಮವನ್ನು ಅವರಿಗೆ ಸಂಬಂಧವೇ ಇಲ್ಲದ ಜನಗಣತಿ ಕೆಲಸಕ್ಕಾಗಿ ಬಳಸುವುದು ಅನ್ಯಾಯ. ನಾಡಿನಲ್ಲಿ ಕೆಲಸ ಸಿಗದೆ ನಿರುದ್ಯೋಗಿ ಯುವಜನತೆ ತೊಳಲಾಡುತ್ತಿದೆ. ಅವರನ್ನು ಇದಕ್ಕೆ ಬಳಸಿಕೊಂಡರೆ ಅವರಿಗೆ ಆರ್ಥಿಕವಾಗಿ ಕೊಂಚ ಅನುಕೂಲ ಆಗುತ್ತದೆ.

⇒ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಸರ್ಕಾರಗಳ ಪರಿಸರ ವಿರೋಧಿ ನಡವಳಿಕೆ ‘ಯೋಜನೆಗಳ ಸಾಲು; ಸೂಕ್ಷ್ಮಪರಿಸರಕ್ಕೆ ಸವಾಲು’

- ವರದಿಯು (ವಾರದ ವಿಶೇಷ, ಪ್ರ.ವಾ., ಮಾರ್ಚ್ 21) ಸಕಾಲಿಕವಾಗಿದೆ. ಸೂಕ್ಷ್ಮಪರಿಸರಕ್ಕೆ ಧಕ್ಕೆ ತರುವ ಯೋಜನೆ ಗಳನ್ನು ಒಂದೆಡೆ ತೋರಿಸಿ ಸವಾಲುಗಳ ಗಂಭೀರ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಮನವ ರಿಕೆ ಮಾಡಿಕೊಡಲಾಗಿದೆ. ಆದರೆ, ಅಧಿಕಾರ ರಾಜಕೀಯಕ್ಕೆ ದರೋಡೆಯೇ ಉದ್ದೇಶ. ಅದರಲ್ಲಿ ಎಲ್ಲ ಪಕ್ಷಗಳೂ ತೆರೆಮರೆಯಲ್ಲಿ ಸಹಕರಿಸುತ್ತವೆ. ಇಂಥ ಕೆಲಸ
ಮಾಡಲಾಗದಂತೆ ಸಾಂವಿಧಾನಿಕ ತಿದ್ದುಪಡಿ ತರಬೇಕಿದೆ. ರಾಜಕೀಯ ಇಷ್ಟು ಮಾನವವಿರೋಧಿ, ಪರಿಸರ ವಿರೋಧಿ ಹಿಂದೆಂದೂ ಆಗಿರಲಿಲ್ಲ. ಅಖಿಲ ಭಾರತ ಮಟ್ಟದ ಚಿತ್ರಣ ಇನ್ನೂ ಹದಗೆಟ್ಟಿದೆ.

⇒ಕೆ.ಎಸ್. ಪಾರ್ಥಸಾರಥಿ, ಬೆಂಗಳೂರು

ಪರಿಶಿಷ್ಟರಿಗೆ ನಾರಾಯಣಗುರುವೇ ಆದರ್ಶ

ಯಾದಗಿರಿ ಜಿಲ್ಲೆಯಲ್ಲಿ ಹನುಮಾನ್ ದೇವಾಲಯದ ಕಟ್ಟೆಯ ಮೇಲೆ ಕುಳಿತಿದ್ದ ಪರಿಶಿಷ್ಟರ ಮೇಲೆ ಹಲ್ಲೆ ನಡೆಸಲಾಗಿದೆ (ಪ್ರ.ವಾ., ಮಾರ್ಚ್ 22). ದೇವರನ್ನು ಮುಂದಿಟ್ಟುಕೊಂಡು ಪರಿಶಿಷ್ಟರಿಗೆ ಮಾಡುತ್ತಿರುವ ನಿರಂತರ ಅವಮಾನಕ್ಕೆ ಕೊನೆ ಇಲ್ಲವೆ? ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎನ್ನುವ ಘೋಷಣೆ ಅನುಷ್ಠಾನದ ಕಡೆಗೆ ತಿರುಗದಿದ್ದರೆ ಹೇಗೆ? ಸಮಾನತೆ ಬಯಸುವ ಪರಿಶಿಷ್ಟ ಸಮಾಜವನ್ನು ಬೇರೆ
ಧರ್ಮದ ಕಡೆಗೆ ಹೋಗಲೂ ಬಿಡದೆ, ತಾನೂ ಸಮಾನತೆ ನೀಡದೆ, ಒಳಗೊಳಗೇ
ಬೆಳೆಯುತ್ತಿರುವ ಅಸಮಾನತೆಗೆ ಒತ್ತು ಕೊಡುತ್ತಿರುವುದು ಸರಿಯೆ? ಈ ಅಸಹನೆ
ಹೋಗಲಾಡಿಸಲು ಆಡಳಿತ ವ್ಯವಸ್ಥೆಯಲ್ಲೂ ಪರಿಣಾಮಕಾರಿ ಸುಧಾರಣೆಗಳಾಗು ತ್ತಿಲ್ಲ. ಅಂದಮೇಲೆ, ಪರಿಶಿಷ್ಟರ ನೆರವಿಗೆ ನಿಲ್ಲುವುದು ಕೇರಳದ ನಾರಾಯಣಗುರು ಸಿದ್ಧಾಂತ ಮಾತ್ರ. ಪರಿಶಿಷ್ಟರು ತಮ್ಮದೇ ದೇವಾಲಯ ಕಟ್ಟಿಕೊಂಡು ಹಿಂದೂ ದೇವಾಲಯಗಳ ಹತ್ತಿರ ಸುಳಿಯದೆ ತಮ್ಮ ಪ್ರತಿಭಟನೆ ದಾಖಲಿಸಬೇಕಿದೆ. ಈ ದಿಸೆಯಲ್ಲಿ ದಲಿತ ಸಂಘಟನೆಗಳು ಆಲೋಚಿಸಲಿ.

⇒ತಾ.ಸಿ. ತಿಮ್ಮಯ್ಯ, ಬೆಂಗಳೂರು

ಕೃಷ್ಣಮೂರ್ತಿ ಪುರಾಣಿಕರ ಪತ್ರಗಳು ಬೇಕು

ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು 80 ಕಾದಂಬರಿಗಳ ಸಹಿತ 116 ಕೃತಿ
ಗಳನ್ನು ರಚಿಸಿದ್ದಾರೆ. ಅವರ 13 ಕಾದಂಬರಿಗಳು ಚಲನಚಿತ್ರಗಳಾಗಿವೆ. ಪುರಾಣಿಕರ
ಕಾದಂಬರಿಗಳನ್ನು ಓದಿದ ಓದುಗರು ಅವರಿಗೆ ಪತ್ರ ಬರೆದು ಸಂತಸ ವ್ಯಕ್ತಪಡಿಸುತ್ತಿ ದ್ದರು. ಅಂತಹ ಅಸಂಖ್ಯಾತ ಪತ್ರಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರಲು
ನಿರ್ಧರಿಸಲಾಗಿದೆ. ಇದೇ ಕೃತಿಯಲ್ಲಿ ಪುರಾಣಿಕರು ಓದುಗರಿಗೆ ಬರೆದ ಪತ್ರಗಳೂ
ದೊರಕಿದರೆ ಅವುಗಳನ್ನೂ ಸೇರಿಸಲು ತೀರ್ಮಾನಿಸಲಾಗಿದೆ. ಅವರು ಮರಳಿ
ಉತ್ತರಿಸಿದ ಪತ್ರಗಳು ಉಳಿದುಕೊಂಡಿದ್ದರೆ ಅವುಗಳ ಪ್ರತಿಯನ್ನು ಕಳುಹಿಸಿಕೊಡ ಬೇಕಾಗಿ ಅರಿಕೆ. ವಿಳಾಸ: ಕಾರ್ಯದರ್ಶಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಗಗನ ಅಪಾರ್ಟ್ಮೆಂಟ್, ರಾಯ್ರೋಡ್, ಟಿಳಕವಾಡಿ, ಬೆಳಗಾವಿ–590006.

⇒ಆನಂದ ಪುರಾಣಿಕ, ಬೆಳಗಾವಿ

ಸಂವಿಧಾನ ಗೌರವಿಸುವುದೇ ದೇಶಭಕ್ತಿ

ಇಡೀ ದೇಶ ಮಾರ್ಚ್ 23ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜ ಗುರು ಅವರ ಬಲಿದಾನವನ್ನು ಸ್ಮರಿಸುತ್ತದೆ. ಆದರೆ, ‘ಹುತಾತ್ಮರ ದಿನ’ವು ಫೋಟೊಗಳಿಗೆ ಹಾರ ಹಾಕಿ ಕೈಮುಗಿಯುವುದಕ್ಕೆ ಸೀಮಿತವಾಗಿದೆ. ಪರಕೀಯ ಸಂಸ್ಕೃತಿಯೇಶ್ರೇಷ್ಠವೆಂಬ ಭ್ರಮೆಯಲ್ಲಿ ನಾಡಿನ ಇತಿಹಾಸ, ವೀರರ ಗಾಥೆಗಳನ್ನು ಮರೆಯುತ್ತಿ ದ್ದೇವೆ. ದೇಶಪ್ರೇಮವು ಕೇವಲ ವಾಟ್ಸ್ಆ್ಯಪ್ ಸ್ಟೇಟಸ್ಗಳಿಗೆ, ಸಾಮಾಜಿಕ ಜಾಲ
ತಾಣಗಳ ಲೈಕ್ಗಳಿಗೆ ಸೀಮಿತವಾಗುತ್ತಿದೆ. ದೇಶಪ್ರೇಮವೆಂದರೆ ಯುದ್ಧ ಮಾಡುವು ದಲ್ಲ. ಅದು ದೇಶದ ಸಂವಿಧಾನ ಹಾಗೂ ಕಾನೂನಿಗೆ ಗೌರವ ನೀಡುವುದಾಗಿದೆ. ದೇಶಕ್ಕಾಗಿ ಪ್ರಾಣ ಕೊಡುವ ಅನಿವಾರ್ಯತೆ ಇಂದು ನಮಗಿಲ್ಲ; ಆದರೆ, ದೇಶಕ್ಕಾಗಿ ಬದುಕುವ ಅವಶ್ಯಕತೆ ಖಂಡಿತಾ ಇದೆ.

⇒ಎಸ್. ನಾಗರಾಜ ನಾಗೂರ, ಬಾಗಲಕೋಟೆ

ತುಂಗಾ ನದಿ ಒಡಲು; ದುಃಖದ ಕಡಲು

ಕಡಿಮೆ ಜನವಸತಿ ಇರುವ ಶೃಂಗೇರಿಯಂತಹ ಮಲೆನಾಡಿನ ಮಡಿಲಲ್ಲಿ ಹರಿಯುವ ತುಂಗಾ ನದಿ ಹೆಚ್ಚು ಕಲುಷಿತಗೊಂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಗೃಹಗಳು, ವಸತಿಗೃಹ, ಹೋಟೆಲ್, ಕೈಗಾರಿಕೆ, ಕೃಷಿ ತ್ಯಾಜ್ಯ ನದಿಯ ಒಡಲು ಸೇರುತ್ತಿದೆ. ಚರಂಡಿ ನೀರನ್ನು ಸಂಸ್ಕರಿಸದೆ ನೇರವಾಗಿ ಹರಿಸಲಾಗು ತ್ತಿದೆ. ಈ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ನದಿಯ ನೈಸರ್ಗಿಕ ಪರಿಸರ ಹದಗೆಟ್ಟಿದೆ. ಮಾನವನ ಈ ಕೃತ್ಯದಿಂದ ಅದೆಷ್ಟೋ ಜಲಚರಗಳು ಮಲೆನಾಡಿನಿಂದ ಕಣ್ಮರೆಯಾಗಿವೆ. ಇನ್ನಾದರೂ ಎಚ್ಚತ್ತುಕೊಂಡು ಪರಿಸರಸ್ನೇಹಿಯಾಗಿ ವರ್ತಿಸಬೇಕಿದೆ. ಇಲ್ಲವಾದರೆ ಭವಿಷ್ಯ ದಲ್ಲಿ ಪ್ರಕೃತಿಯೇ ಮಲೆನಾಡಿಗರಿಗೆ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.

ಸಚಿನ್ ಹೊಳೆಹದ್ದು, ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.