ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪದವೀಧರರ ಮತದಾನ: ಬೇಕು ಆಜೀವ ಸದಸ್ಯತ್ವ

Last Updated 27 ಅಕ್ಟೋಬರ್ 2021, 17:26 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮತದಾನ ಮಾಡಲು, ಹದಿನೆಂಟು ವರ್ಷ ಪೂರೈಸಿದವರು ಒಮ್ಮೆ ನೋಂದಣಿಯಾಗಿ ಗುರುತಿನ ಚೀಟಿ ಪಡೆದರೆ ಆಜೀವ ಸದಸ್ಯತ್ವ ಪಡೆದಂತೆ ಆಗಿರುತ್ತದೆ. ಅದೇ ರೀತಿ ಪದವೀಧರರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರು ಮತದಾನ ಮಾಡಲು ಅರ್ಹರಾಗಿರುತ್ತಾರೆ. ಆದರೆ ಇಲ್ಲಿ ಮತದಾನ ಮಾಡಲುನಮೂನೆ-18ರಲ್ಲಿ ಅರ್ಜಿ ಸಲ್ಲಿಸುವ ಜೊತೆಗೆ ಪದವಿ ಪ್ರಮಾಣಪತ್ರ, ಗುರುತಿನ ಚೀಟಿಗಳನ್ನು ನೀಡಿ ನೋಂದಾ ಯಿಸಬೇಕಾಗುತ್ತದೆ. ಪ್ರತೀ ಬಾರಿ ಈ ಚುನಾವಣೆ ಬಂದಾಗಲೂ ಹಿಂದೆ ನೋಂದಾಯಿಸಿದ್ದರೂ ಮತ್ತೆ ಮತ್ತೆ ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಚುನಾವಣಾ ಆಯೋಗವು ಒಮ್ಮೆ ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾರರಾಗಿ ನೋಂದಾಯಿಸಿದವರಿಗೆ ಶಾಶ್ವತ ಸದಸ್ಯತ್ವ ನೀಡಲು ಏಕೆ ಮುಂದಾಗುತ್ತಿಲ್ಲ?

ಈ ಹಿಂದೆಯೇ ನೀಡಿರುವ ಹಳೆಯ ಚುನಾವಣಾ ಗುರುತಿನ ಚೀಟಿಗೆ ಪದವೀಧರರ ಕ್ಷೇತ್ರವನ್ನು ನಮೂದಿಸಿ ಹೊಸ ಗುರುತಿನ ಚೀಟಿಯನ್ನು ವಿತರಣೆ ಮಾಡಿದರೆ ಒಳ್ಳೆಯದಲ್ಲವೇ? ಇದರಿಂದ ಪ್ರತಿಬಾರಿಯೂ ಚುನಾವಣೆಗೆ ಅರ್ಜಿ ಸಲ್ಲಿಸಿ ಗೊಂದಲದೊಡನೆ ಮತದಾನ ಮಾಡುವ ವಿಳಂಬ ಪ್ರಕ್ರಿಯೆಗೆ ಕಡಿವಾಣ ಬೀಳುತ್ತದೆ. ಈ ಆಧುನಿಕ ಯುಗದಲ್ಲಿ ಚುನಾವಣಾ ಆಯೋಗವು ನೂತನ ತಾಂತ್ರಿಕತೆಯ ಮೂಲಕ ಸಾರ್ವಜನಿಕರಿಗೆ ಸಹಕಾರ ನೀಡಲಿ.

-ಮಹದೇವಪ್ಪ ಪಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT