ಶನಿವಾರ, ಜೂನ್ 12, 2021
24 °C

ಮನೆ ಬಾಗಿಲಿಗೆ ದಿನಸಿ ವಿತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೆ ವಾರಾಂತ್ಯ ಕರ್ಫ್ಯೂ ವಿಧಿಸಿದ್ದಕ್ಕೂ ಈಗ ವಿಧಿಸಿರುವ ಲಾಕ್‌ಡೌನ್‌ಗೂ ಅಂತಹ ವ್ಯತ್ಯಾಸಗಳೇನೂ ಕಾಣಿಸುತ್ತಿಲ್ಲ. ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಲು ಅವಕಾಶ ಮಾಡಿರುವುದೇನೊ ಸರಿಯಾಗಿದೆ. ಅದರಂತೆಯೇ ಆಯಾ ವಾರ್ಡ್‌ಗಳಿಗೆ ತಕ್ಕಂತೆ ಕಿರಾಣಿ ಸಾಮಾನುಗಳನ್ನೂ ಲಾರಿ ಅಥವಾ ಸರ್ಕಾರಿ ಬಸ್ಸುಗಳ ಮುಖಾಂತರ ಮನೆ ಬಾಗಿಲಿಗೆ ತಂದು ಮಾರಲು ಅವಕಾಶ ಕಲ್ಪಿಸಿದರೆ ಅದರಿಂದ ಜನ ತಮ್ಮ ತಮ್ಮ ಮನೆಯ ಮುಂದೆಯೇ ದಿನಸಿ ಸಾಮಾನುಗಳನ್ನು ಖರೀದಿಸಬಹುದು. ಇದರಿಂದ ಬೆಳಿಗ್ಗೆ 6ರಿಂದ 10 ಗಂಟೆಯವರೆಗಿನ ಅವಧಿಯಲ್ಲಿ ಸಾರ್ವಜನಿಕರು ವಸ್ತುಗಳನ್ನು ಖರೀದಿಸಲು ಗುಂಪುಗೂಡುವುದು ತಪ್ಪುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಲಿ.

–ಇಂದಿರಾ ಶ್ರೀಧರ್, ಮಳಲಕೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು