ಉದ್ಯೋಗ ಸೃಷ್ಟಿಸಿ

7

ಉದ್ಯೋಗ ಸೃಷ್ಟಿಸಿ

Published:
Updated:

ಹೊಸ ಸರ್ಕಾರವೊಂದು ರಚನೆಯಾದಾಗ ಹೊಸ ಭರವಸೆಗಳೂ ಹೊರಬೀಳುತ್ತವೆ. ಯುವ ಪೀಳಿಗೆಗೆ ಉದ್ಯೋಗ ಅವಕಾಶ ಸೃಷ್ಟಿಸಿಕೊಡುವ ವಿಷಯವೂ ಅದರಲ್ಲಿ ಅಡಕವಾಗಿರುತ್ತದೆ. ಆದರೆ ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ಮಾತ್ರ ಕಾಣಿಸುವುದಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ನಿತ್ಯನಿರಂತರ ಎಂಬಂತಾಗಿದೆ.

ಖಾಸಗಿ ವಲಯದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಡುವುದು ಇರಲಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನೂ ತುಂಬಲು ಸರ್ಕಾರ ಮನಸ್ಸು ಮಾಡುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಬೊಕ್ಕಸಕ್ಕೆ ಹೊರೆ ಎಂಬ ಕಾರಣಕ್ಕೆ ಹುದ್ದೆಗಳನ್ನು ತುಂಬದೇ ಇರುವುದು ಸರಿಯಲ್ಲ. ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಆಗುವ ಬಾಧಕ ಮುಖ್ಯವಾಗಬೇಕು.

ಅನುತ್ಪಾದಕ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ಸುರಿಯಲು ಸರ್ಕಾರದ ಬಳಿ ಹಣ ಇರುತ್ತದೆ. ಆದರೆ ಯುವ ಪೀಳಿಗೆಗೆ ಉದ್ಯೋಗ ಒದಗಿಸುವುದು ಹೊರೆಯೆನಿಸುತ್ತದೆ. ಶಿಕ್ಷಣಕ್ಕೆ ನೀಡುವಷ್ಟೇ ಒತ್ತು ಉದ್ಯೋಗ ಅವಕಾಶಗಳ ಸೃಷ್ಟಿಗೂ ನೀಡಬೇಕು. ಪಾರದರ್ಶಕ ರೀತಿಯಲ್ಲಿ ಕಾಲಕಾಲಕ್ಕೆ ನೇಮಕಾತಿಗಳು ಆಗುವಂತೆ ರಾಜ್ಯದ ಈಗಿನ ಸರ್ಕಾರವಾದರೂ ಕ್ರಮ ಕೈಗೊಳ್ಳಲಿ.

– ಅಮಿತಕುಮಾರ ಬಿರಾದಾರ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !