ಶುಕ್ರವಾರ, ಡಿಸೆಂಬರ್ 4, 2020
24 °C

ವಾಚಕರ ವಾಣಿ: ಬೇಕಾಗಿದೆ ರಾಜಕೀಯ–ಸಾಂಸ್ಕೃತಿಕ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾಂಸ್ಕೃತಿಕ ನಂಟಿನ ರಾಜಕಾರಣ’ ಎಂಬ ಸರ್ಫ್ರಾಜ್‌ ಚಂದ್ರಗುತ್ತಿ ಅವರ ಲೇಖನದ (ಸಂಗತ, ನ. 11) ಆಶಯ ಸ್ವಾಗತಾರ್ಹ. ಪ್ರಜಾಪ್ರಭುತ್ವ ಉಳಿದು ಬೆಳೆಯಬೇಕು. ಸ್ವಾತಂತ್ರ್ಯ, ಸಹೋದರತ್ವ, ಸಮಾನತೆಯ ಪೋಷಣೆಗೆ, ಅದರಲ್ಲೂ ಸಾಮಾಜಿಕ ನ್ಯಾಯ ಕಟ್ಟಕಡೆಯ ಮನುಷ್ಯನಿಗೂ ದೊರೆಯಬೇಕಾದರೆ ಸಾಹಿತ್ಯದ ಒಲವುಳ್ಳವರು ರಾಜಕಾರಣಕ್ಕೆ ಬರಬೇಕು. ಅಂತಹ ಸಂಸ್ಕೃತಿಯುಳ್ಳವರನ್ನು ರಾಜಕೀಯ ಪಕ್ಷಗಳೂ ಹೃದಯಪೂರ್ವಕವಾಗಿ ರಾಜಕೀಯಕ್ಕೆ ಸ್ವಾಗತಿಸಿ, ಸರ್ಕಾರದ ನೀತಿ, ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು.

ಮಹಿಳೆಯರು ಚುನಾವಣೆಗಳಲ್ಲಿ ಗೆಲ್ಲುವುದಿಲ್ಲ ಎಂಬ ನೆಪ ಮುಂದೊಡ್ಡಿ ಟಿಕೆಟ್ ನಿರಾಕರಿಸುವಂತೆ ಸಾಹಿತಿ, ಕಲಾವಿದರಿಗೂ ನಿರಾಕರಿಸಲಾಗುತ್ತಿದೆ. ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರಂತಹವರನ್ನೂ ನಮ್ಮ ಮತದಾರರು ಸೋಲಿಸಿದ ಉದಾಹರಣೆಗಳಿವೆ. ವಿಧಾನಪರಿಷತ್, ರಾಜ್ಯಸಭೆಯಲ್ಲಿ ಹಿರಿಯ ಸಾಹಿತಿಗಳು, ಸಮಾಜಸೇವಕರು, ಕಲಾವಿದರಿಗಾಗಿ ಸಂವಿಧಾನಕರ್ತರು ಇರಿಸಿರುವ ಸ್ಥಾನಗಳು ಸಹ ರಾಜಕಾರಣಿಗಳ ಪಾಲಾಗುತ್ತಿರುವುದು ವಿಷಾದನೀಯ. ಅಧಿಕಾರಸ್ಥರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮತದಾರರು ಪ್ರಜ್ಞಾವಂತರಾಗಿ, ಸಾಂಸ್ಕೃತಿಕ ನಂಟುಳ್ಳವರನ್ನು ಆರಿಸಿ, ದೇಶವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕರಿಸಬೇಕು.‌

–ಜಿ.ಸಿ.ಬಸವಲಿಂಗಪ್ಪ, ದಾವಣಗೆರೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು