ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗೇಕೆ ನೆನಪಾಯ್ತು?

Last Updated 19 ನವೆಂಬರ್ 2018, 17:08 IST
ಅಕ್ಷರ ಗಾತ್ರ

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಬಗ್ಗೆ ಈಚೆಗೆ ಎಚ್.ಡಿ. ದೇವೇಗೌಡರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇಷ್ಟು ವರ್ಷಗಳ ನಂತರ ದೇವೇಗೌಡರು ಆಡಿದ ಮಾತುಗಳು ನಿಜವಾಗಿಯೂ ಹೊಗಳಿಕೆಯವೇ ಅಥವಾ ಅದರ ಹಿಂದೆ ತೆಗಳಿಕೆಯೂ ಇದೆಯೇ ಎಂಬುದನ್ನು ಪ್ರಾಜ್ಞರು ಪರಾಮರ್ಶಿಸಬೇಕು.

‘ನಿಮಗೆ 1.3 ಲಕ್ಷ ಸಾಲವಿದೆ. 4 ಗಂಡು, 2 ಹೆಣ್ಣು ಮಕ್ಕಳ ದೊಡ್ಡ ಸಂಸಾರ. ಅವರ ಕಡೆಗೂ ಸ್ವಲ್ಪ ನೋಡಿ. ಈ ಸೂಟ್‍ಕೇಸ್ ತಕ್ಕೊಳ್ಳಿ’ ಎಂದು ಅರಸು ಅವರು ಗೌಡರಿಗೆ ಹೇಳಿದ್ದರಂತೆ. ಅದರ ಹಿಂದೆ ತಮ್ಮ ವಿರುದ್ಧ ಇರುವ ಆರೋಪಗಳನ್ನು ಗೌಡರು ಹೊರಗೆಳೆಯಬಾರದು ಎಂಬ ಆಲೋಚನೆ ಅರಸು ಅವರಿಗೆ ಇತ್ತಂತೆ. ತಾವು ಆ ಆಮಿಷಕ್ಕೆ ಬಲಿಯಾಗಲಿಲ್ಲ. ಸೂಟ್‍ಕೇಸ್ ಪಡೆಯಲಿಲ್ಲ ಎಂಬುದನ್ನೂ ಗೌಡರು ಅದೇ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ. ಮುಂದೆ ಅರಸು ವಿರುದ್ಧದ ಆರೋಪ ಏನಾಯಿತು ಗೊತ್ತಾಗಲಿಲ್ಲ. ಆದರೆ ಗೌಡರು ಅರಸು ಅವರನ್ನು ಶ್ಲಾಘಿಸಿ, ‘ಅವರೊಬ್ಬ ಶ್ರೇಷ್ಠ- ಪ್ರಾಮಾಣಿಕ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ.

ಆಗಿನ ಪ್ರಸಂಗವನ್ನು ದೇವೇಗೌಡರು ಈಗ ಹೇಳಲು ಕಾರಣವೇನು? ಅರಸು ಸೂಟ್‍ಕೇಸ್ ಕೊಡಲು ಮುಂದೆ
ಬಂದದ್ದು ಏಕೆ? ಗೌಡರ ಕುಟುಂಬದ ಮೇಲಿನ ಕರುಣೆಯಿಂದಲೋ? ತಮ್ಮ ವಿರುದ್ಧದ ಆರೋಪ ಮುಚ್ಚಿಡಬೇಕು ಎಂಬ ಉದ್ದೇಶಕ್ಕೋ? ಅಥವಾ ತಾವು ಸೂಟ್‍ಕೇಸ್ ನಿರಾಕರಿಸಿದ ಶುದ್ಧಹಸ್ತರು ಎಂಬುದನ್ನು ಜಾಹೀರುಪಡಿಸಲೋ... ಎಂಬ ವಿಚಾರಗಳಲ್ಲಿ ಸ್ಪಷ್ಟತೆ ಕಾಣಿಸುತ್ತಿಲ್ಲ. ಬಹುತರವಾಗಿ ಈ ಎಲ್ಲ ಕಾರಣಗಳೂ ಇದ್ದರೂ ಇರಬಹುದು?!

ಸುಭಾಸ ಯಾದವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT