ತರ್ಕಬದ್ಧತೆ ಇರಲಿ

7

ತರ್ಕಬದ್ಧತೆ ಇರಲಿ

Published:
Updated:

‘ನನ್ನ ತಪ್ಪಿನಿಂದ ಧರ್ಮಸಿಂಗ್‌ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೊ. ಶಿವರಾಮಯ್ಯ ಅವರು, ಕುಮಾರಸ್ವಾಮಿ ಅವರದ್ದು ‘ದೊಡ್ಡ ಗುಣ’ (ವಾ.ವಾ., ಆ. 1) ಎಂದಿದ್ದರು. ಇದರಲ್ಲಿ ತಪ್ಪೇನಿದೆ? ರಾಜಕಾರಣಿಗಳನ್ನು ಯಾವಾಗಲೂ ವಕ್ರವಾಗಿಯೇ ನೋಡುವುದು ಪ್ರಜಾಪ್ರಭುತ್ವಕ್ಕೆ ಅಷ್ಟೊಂದು ಆರೋಗ್ಯಕರವಲ್ಲ. ಇದಕ್ಕೆ ಪ್ರೊ. ರಘುನಾಥ್ (ವಾ.ವಾ., ಆ.2) ಅವರು ಅನ್ಯಥಾ ಭಾವಿಸಬಾರದು.

ಇಲ್ಲಿ ಮತ್ತೊಂದು ಮುಖ್ಯ ವಿಷಯ: ಧರ್ಮಸಿಂಗ್ ಅವರು ಅತ್ಯಂತ ಕ್ರಿಯಾಹೀನ ಮುಖ್ಯ ಮಂತ್ರಿಯಾಗಿದ್ದರು. ಆದರೆ, ಒಟ್ಟು ಅಧಿಕಾರವನ್ನು ತಮ್ಮ ಕೈಯಲ್ಲಿಯೇ ಇಟ್ಟುಕೊಳ್ಳುವ ಚಾಣಾಕ್ಷತನವನ್ನು ಬಲ್ಲವರಾಗಿದ್ದರು. ಇದರ ಬಗ್ಗೆ ಕಾಂಗ್ರೆಸ್‌ನವರೇ ಆ ಕಾಲಘಟ್ಟದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಿದೆ. ಕೆಲವು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವುದರ ಕುರಿತು ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರು ಒಂದೇ ಸಮನೆ ಸೂಚನೆ ನೀಡಿದರೂ ಅದನ್ನು ಧರ್ಮಸಿಂಗ್ ಗಂಭೀರವಾಗಿ ಪರಿಗಣಿ
ಸಿಯೇ ಇರಲಿಲ್ಲ. ಅವರ ಸೂಚನೆಗಳನ್ನು ಪರಿಗಣಿಸಿದ್ದರೆ ರಾಜಕೀಯ ಏರು ಪೇರು ಆಗುತ್ತಲೇ ಇರಲಿಲ್ಲ.

ಹಾಗೆ ನೋಡಿದರೆ ಧರ್ಮಸಿಂಗ್ ಅವರು ದೂರದೃಷ್ಟಿಯುಳ್ಳ ರಾಜಕಾರಣಿಯೂ ಆಗಿರಲಿಲ್ಲ. ಸಭ್ಯ ಮನುಷ್ಯ ರಾಗಿದ್ದರು. ಈ ನೆಲೆಯಲ್ಲಿ ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಆಗುಹೋಗುಗಳನ್ನು ತರ್ಕಬದ್ಧವಾಗಿಯೇ ನೋಡಬೇಕಾಗುತ್ತದೆ.

–ಶೂದ್ರ ಶ್ರೀನಿವಾಸ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !