ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಿ ಧೋರಣೆ ಸಲ್ಲ

ಅಕ್ಷರ ಗಾತ್ರ

ಒಂದು ಸ್ವಸ್ಥ ಸಮಾಜ, ಸ್ವಸ್ಥ ಪರಿಸರ ನಿರ್ಮಾಣದಲ್ಲಿ ಕಲಾವಿದರು- ಕಲೆ, ಸಾಹಿತಿಗಳು- ಸಾಹಿತ್ಯ ಪ್ರಮುಖವಾದ ಪಾತ್ರವನ್ನು ವಹಿಸುತ್ತಾ ಬಂದಿವೆ. ಸ್ವಾತಂತ್ರ್ಯ ಹೋರಾಟವೂ ಸೇರಿದಂತೆ ಇದುವರೆಗಿನ ಯಾವುದೇ ಹೋರಾಟಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು, ಸಮಾಜದ ಹಿತಕ್ಕೆ ಪೂರಕವಾಗಿ ಕೆಲಸ ಮಾಡುವವರು ಕಲಾವಿದರು, ಸಾಹಿತಿಗಳು. ಸದಾ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ರಂಗಭೂಮಿ ಎಲ್ಲ ಕಾಲಕ್ಕೂ ಪ್ರತಿಭಟನೆಯ ಅಸ್ತ್ರವಾಗಿದೆ.

ಜನಪರವಾಗಿ, ಜೀವಪರವಾಗಿ, ಪರಿಸರಪರವಾಗಿ ಸದಾ ಕೆಲಸ ಮಾಡುವ ವಿವಿಧ ಕಲಾ ಪ್ರಕಾರಗಳು ಸಾಂಸ್ಕೃತಿಕ ವಾಗಿ ಜೀವಂತವಾಗಿ ಇರಬೇಕಾಗುತ್ತದೆ. ಆದರೆ ಇವು ನಿಷ್ಕ್ರಿಯವಾಗುತ್ತಿದ್ದು, ಅಕಾಡೆಮಿಗಳು ಪ್ರೋತ್ಸಾಹದ ಕೊರತೆ ಎದುರಿಸುತ್ತಿವೆ. ನಾಟಕಗಳನ್ನು ಪ್ರತಿಬಂಧಿಸುವ ಕೆಲಸ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಇತ್ತೀಚೆಗೆ ನಡೆದಿರುವುದು ಖಂಡನೀಯ. ಜೋಸೆಫ್‌ ಸ್ಟೀನ್ ಅವರ ಮೂಲ ನಾಟಕವನ್ನು ಜಯಂತ್ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರಿಸಿರುವ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಕೆಲವರು ಅಡ್ಡಿಪಡಿಸಿರುವುದು ಸರ್ವಾಧಿಕಾರದ ಧೋರಣೆಯಾಗಿದೆ. ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು. ನಾಟಕ ಅಥವಾ ಅಭಿವ್ಯಕ್ತಿಯು ಸದಾ ಸ್ವತಂತ್ರವಾಗಿ ಇರಬೇಕು.

– ಡಾ. ಎ.ಆರ್.ಗೋವಿಂದ ಸ್ವಾಮಿ ನಾಯಕ್, ದೇವರಾಜ್, ವೆಂಕಟರಾಜು, ಶ್ರೀನಾಥ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT