ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಭಾವದ ನಡೆ ಸರಿಯಲ್ಲ

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳಲ್ಲಿ ಮೂಲ ಮತ್ತು ವಲಸಿಗರೆಂಬ ಭಿನ್ನಭಾವದ ನಡೆ ಸಮರ್ಥನೀಯವಲ್ಲ. ಯಾವ ರಾಜಕೀಯ ಪಕ್ಷವೂ ಇಂದು ತಮ್ಮ ಮೂಲ ಆಶಯಗಳಿಗೆ ತಕ್ಕಂತೆ ಇಲ್ಲ. ಕಾಲ ಬದಲಾದಂತೆ ಅವುಗಳ ಸೈದ್ಧಾಂತಿಕ ನಡೆ– ನುಡಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ರಾಜಕೀಯ ನಾಯಕರು ತಮಗೆ ಅನುಕೂಲ ಎನಿಸಿದಾಗಲೆಲ್ಲಾ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿದಿದ್ದಾರೆ. ಹೀಗೆ ಬಂದವರಲ್ಲಿ ಪಕ್ಷಕ್ಕಾಗಿ ದುಡಿದವರೂ ಇದ್ದಾರೆ, ಬರೀ ಅಧಿಕಾರವನ್ನು ಅನುಭವಿಸಿದವರೂ ಇದ್ದಾರೆ.

ಮತ್ತೊಂದು ಪಕ್ಷದಿಂದ ಕಾಂಗ್ರೆಸ್‌ಗೆ ಬಂದು, ಪಕ್ಷವನ್ನು ಮುನ್ನಡೆಸಿ, ಮುಖ್ಯಮಂತ್ರಿಯಾಗಿ ಅವಧಿ ಪೂರೈಸಿ, ಈಗ ಮಾಜಿ ಎನಿಸಿಕೊಂಡ
ವರನ್ನು ಇನ್ನೂ ವಲಸೆ ಬಂದವರು ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ತಾವು ಮೂಲ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳುವವರು ನಿಜಕ್ಕೂ ಪಕ್ಷದ ನಿಷ್ಠಾವಂತರಾಗಿದ್ದರೆ, ಇತ್ತೀಚೆಗೆ ನಡೆದ ವಿಧಾನಸಭಾಉಪಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದೆ ಇರುತ್ತಿರಲಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಸಂಘಟಿಸುತ್ತಿದ್ದರೇ ಹೊರತು ‘ಕೈ’ ಕೊಡುತ್ತಿರಲಿಲ್ಲ. ಈಗಲಾದರೂ ಒಣಪ್ರತಿಷ್ಠೆಯನ್ನು ಬಿಟ್ಟು ಒಂದಾಗಿ, ಪಕ್ಷ ಸಂಘಟನೆಯಲ್ಲಿ ಅವರೆಲ್ಲ ಕಾರ್ಯಕರ್ತರ ‘ಕೈ’ ಹಿಡಿಯಲಿ.

–ರುದ್ರೇಶ್ ಅದರಂಗಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT