ಗುರುವಾರ , ನವೆಂಬರ್ 21, 2019
20 °C

ಕಠಿಣ ಕ್ರಮ ಅಗತ್ಯ

Published:
Updated:

ಕೇರಳದ ಕಸಕ್ಕೆ ಮೈಸೂರಿನಲ್ಲಿ ಏಜೆಂಟರು ಸೃಷ್ಟಿಯಾಗಿ ಕಸದ ಮಾಫಿಯಾಕ್ಕೆ ಕಾರಣರಾಗಿರುವ ಸುದ್ದಿ (ಪ್ರ.ವಾ., ಆ. 29) ಬೇಸರ ಹುಟ್ಟಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಕಸ ವಿಲೇವಾರಿ
ಅತ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ.

ಕೇರಳ ರಾಜ್ಯದ ಕಸವನ್ನು ತಂದು ನಮ್ಮ ರಾಜ್ಯದಲ್ಲಿ ವಿಲೇವಾರಿ ಮಾಡುವ ಏಜೆಂಟರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಊರಿನ ಜನರು ಏಜೆಂಟರ ಆಮಿಷಕ್ಕೆ ಬಲಿಯಾಗಬಾರದು. ಇಂಥವರ ಮಾಹಿತಿಯನ್ನು ಕೂಡಲೇ ಅಧಿಕಾರಿಗಳಿಗೆ ತಿಳಿಸಬೇಕು. ಜನ ಇನ್ನು ಮುಂದಾದರೂ ಎಚ್ಚೆತ್ತರೆ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು.

ಹನುಮೇಶ ಹೆಗ್ಗಪೂರ್, ಸಿಂಧನೂರು

ಪ್ರತಿಕ್ರಿಯಿಸಿ (+)