ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹಿರಿಯರ ನಡೆಯೇ ಮಕ್ಕಳ ಕಲಿಕೆಯಾಗಲಿ

Last Updated 13 ಜನವರಿ 2023, 19:30 IST
ಅಕ್ಷರ ಗಾತ್ರ

ಭಾರತೀಯ ಆಹಾರ, ವಿಹಾರ, ಹಬ್ಬ ಹರಿದಿನಗಳ ಆಚರಣೆಗಳಿಗೂ ಆಯುರ್ವೇದ ವೈದ್ಯಶಾಸ್ತ್ರಕ್ಕೂ ಅವಿನಾಭಾವ ಸಂಬಂಧವಿದೆ. ವರ್ಷದ ಯಾವ ಋತುವಿನಲ್ಲಿ ಯಾವ ಯಾವ ಆಹಾರ ವಿಹಾರಗಳು ಯೋಗ್ಯ ಎಂಬ ಬಗ್ಗೆ ವಿಸ್ತೃತ ಉಲ್ಲೇಖಗಳಿವೆ. ಆಹಾರದಲ್ಲಿ ಗಿಡಮೂಲಿಕೆಗಳು, ಖನಿಜಗಳ ಜೊತೆಗೆ ಪ್ರಾಣಿಜನ್ಯ ಆಹಾರವನ್ನೂ ವಿವರಿಸಲಾಗಿದೆ. ಸಣ್ಣಪುಟ್ಟ ಉಡದಂತಹವುಗಳ ಜೊತೆಗೆ ಬೆಕ್ಕು, ಆಕಳು, ಎಮ್ಮೆ, ಆಡು, ಒಂಟೆ, ಹುಲಿ, ಕರಡಿ, ಮಂಗದಂತಹವು ಗಳ ಮಾಂಸ, ಮಲ, ಮೂತ್ರಗಳನ್ನು ಔಷಧಕ್ಕೆ ಬಳಸುವ ಬಗೆಗೂ ಹೇಳಲಾಗಿದೆ. ನನಗೆ ತಿಳಿದಂತೆ, ಮಾಂಸಾಹಾರ, ಶಾಕಾಹಾರ ಎಂದು ವಿಭಾಗಿಸಿ ವಿವರಿಸಿಲ್ಲ. ರೋಗ ಬಂದವನಿಗೆ ಹಾಗೂ ಮುಂದೆ ರೋಗ ಬರಬಾರದೆಂಬುವವನಿಗೆ ಯಾವಾಗ ಯಾವುದು ಸೂಕ್ತ ಎಂದಷ್ಟೇ ವಿವರಿಸಲಾಗಿದೆ. ಆಯುರ್ವೇದದಲ್ಲಿ ಸಾತ್ವಿಕ- ತಾಮಸ ಎಂದು ಆಹಾರದ ವಿಭಾಗ ಇದ್ದದ್ದು ನನಗೂ, ನಾನು ಸಲಹೆ ಪಡೆದ ಕೆಲ ಮಿತ್ರರಿಗೂ ಗೊತ್ತಿಲ್ಲ. ಧರ್ಮ ಬೇಕೆನ್ನುವವರು ಮಠ, ಚರ್ಚು, ಮದರಸಾಗಳಲ್ಲಿ ಅವರವರ ಧರ್ಮವನ್ನು ಅವರವರು ಕಲಿತುಕೊಳ್ಳಲಿ.

ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ ಅವರು ಅಭಿಪ್ರಾಯಪಟ್ಟಂತೆ (ಸಂಗತ, ಜ. 11) ನೈತಿಕ ಶಿಕ್ಷಣಕ್ಕೆ ಸಂವಿಧಾನವೇ ಮೂಲ ಸೆಲೆ. ಸರ್ಕಾರದ ಶ್ರಮವು ಸಂವಿಧಾನವನ್ನು ಕಲಿಸುವುದಕ್ಕೆ ಸೀಮಿತಗೊಳ್ಳಲಿ. ಮಕ್ಕಳ ಚಿಂತನೆಯನ್ನು ಸಂವಿಧಾನ ಸೂಚಿಸಿದಂತೆ ವೈಜ್ಞಾನಿಕ ನೆಲೆಯಲ್ಲಿ ರೂಢಿಸಬೇಕು. ಈ ಪಠ್ಯಕ್ಕೆ ಪರೀಕ್ಷೆಯನ್ನೂ ನಡೆಸಬೇಕು. ನಮ್ಮ ಮುಂದಿನ ತಲೆಮಾರಾದರೂ ನೆಮ್ಮದಿಯಿಂದ ಇರಲಿ. ಮಕ್ಕಳಿಗೆ ಇದು ಕಲಿಸಬೇಕು, ಅದು ಕಲಿಸಬೇಕು ಎಂದು ಪ್ರಯತ್ನ ಮಾಡುವುದನ್ನು ಬಿಟ್ಟು, ಏನು ಕಲಿಸಬೇಕೆಂಬುದು ಇದೆಯೋ ಅದನ್ನು ನಾವು ನಡೆದು ತೋರಿಸಿದರೆ ಸಾಕು.

–ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT