ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯ ಕಡ್ಡಾಯವಲ್ಲ

Last Updated 28 ಅಕ್ಟೋಬರ್ 2019, 20:20 IST
ಅಕ್ಷರ ಗಾತ್ರ

‘ವಾಯುಮಾಲಿನ್ಯ, ಶಬ್ದಮಾಲಿನ್ಯದ ಹೆಸರಿನಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರುತ್ತಿರುವುದು ಸರಿಯಲ್ಲ. ಇದರಿಂದ ನಮ್ಮ ಸಂಪ್ರದಾಯಗಳು ಮರೆಯಾಗಲಿವೆ’ ಎಂಬ ಪಟಾಕಿ ಅಂಗಡಿ ಮಾಲೀಕರೊಬ್ಬರ ಹೇಳಿಕೆಯನ್ನು ಓದಿ (ಪ್ರ.ವಾ., ಅ. 27) ಆಶ್ಚರ್ಯವಾಯಿತು. ಹವಾ ಮಾನ ವೈಪರೀತ್ಯದ ಬಾಧಕ ಕಾಣುತ್ತಿದೆ, ಪರಿಸರ ಮಲಿನ‌ವಾಗುತ್ತಿದೆ ಎಂದು ಪ್ರಪಂಚವೇ ಬೊಬ್ಬೆ ಹಾಕುತ್ತಿದೆ. ಇವಕ್ಕೆಲ್ಲ ಕಾರಣ ಹೆಚ್ಚಿನ ಹೊಗೆ. ಅದೇ ರೀತಿ ಪಟಾಕಿ ಸುಡುವುದರಿಂದ ಹೆಚ್ಚಿನ ಹೊಗೆ ಸೃಷ್ಟಿಸುತ್ತೇವೆ. ಮೊದಲೆಲ್ಲ ದೀಪಾವಳಿ ಹಬ್ಬವನ್ನು ದೀಪಗಳಿಂದ ಅಲಂಕರಿಸಿ ಆಚರಿಸುತ್ತಿದ್ದರು. ಕೆಲ ವಿಷಯಗಳಲ್ಲಿ ನಾಜೂಕುತನ ಮತ್ತು ಸಂಪ್ರದಾಯಗಳನ್ನು ಬಿಟ್ಟರೆ ಎಲ್ಲರಿಗೂ ಕ್ಷೇಮ. ಅಷ್ಟಕ್ಕೂ ಸಂಪ್ರದಾಯಗಳು ನಾವು ನಮ್ಮ ಸಂತೋಷಕ್ಕಾಗಿ ಮಾಡಿಕೊಂಡಿರುವಂಥವು.

-ಡಾ. ಮಲ್ಲಿಕಾರ್ಜುನ,ಗೊಡಬನಹಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT