ಜನತಂತ್ರಕ್ಕೆ ಸೋಲಾಗದಿರಲಿ!

7

ಜನತಂತ್ರಕ್ಕೆ ಸೋಲಾಗದಿರಲಿ!

Published:
Updated:

ಕರ್ನಾಟಕದ ಮೈತ್ರಿ ಸರ್ಕಾರ ಇಷ್ಟೊಂದು ಅತಂತ್ರ ಸ್ಥಿತಿಯಲ್ಲಿ ಮುಂದುವರಿಯಬಹುದು ಎಂದು ರಾಜ್ಯದ ಜನರು ಭಾವಿಸಿರಲಾರರು. ಸರ್ಕಾರದ ಈಗಿನ ಸ್ಥಿತಿಯನ್ನು ನೋಡಿದರೆ, ಇದೊಂದು ಪ್ರಜಾರಾಜ್ಯದ ಸೋಲು ಎಂದು ಹೇಳಬಹುದಾಗಿದೆ. ಭಾವಪರವಶರಾದ ಮುಖ್ಯಮಂತ್ರಿಯ ಸಹನೆ ಮೀರಿದ ಮಾತುಗಳು, ವಿರೋಧ ಪಕ್ಷದವರ ಅಧಿಕಾರದ ದಾಹ, ಸಚಿವರಾಗಬೇಕೆಂಬ ಬಯಕೆಯ ಅತೃಪ್ತ ಶಾಸಕರ ಹೋರಾಟ, ಖಾತೆಗಳ ಹಂಚಿಕೆಯಲ್ಲಿ ಕಿತ್ತಾಟ... ಇವನ್ನೆಲ್ಲ ನೋಡಿ ರಾಜ್ಯದ ಜನ ರೋಸಿ ಹೋಗಿದ್ದಾರೆ. ರಾಜಕೀಯ ಸುದ್ದಿ ಕೇಳುವುದು ಹಾಗೂ ಓದುವುದು ‘ಅಲರ್ಜಿ’ಯಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪಕ್ಷವು ರಾಜ್ಯ ರಾಜಕೀಯದ ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಹೈಕಮಾಂಡ್‌ನತ್ತ ಮುಖ ಮಾಡುತ್ತ ದಿನ ದೂಡುವುದು ಎಷ್ಟು ಸರಿ? ಅತಂತ್ರ ಸ್ಥಿತಿಯನ್ನು ಹೋಗಲಾಡಿಸಬೇಕಾದ ಕಾಂಗ್ರೆಸ್‌ ಹೈಕಮಾಂಡ್ ಸಹ ಇಷ್ಟೊಂದು ಅಸಹಾಯಕವಾಗಬಾರದು.

ಇದೇ ಸ್ಥಿತಿ ಮುಂದುವರಿದರೆ ಜನರು ಭ್ರಮನಿರಸನಗೊಳ್ಳುವುದರಲ್ಲಿ ಸಂದೇಹವಿಲ್ಲ. ಹಾಗೇನಾದರೂ ಆದರೆ ಪ್ರಜಾರಾಜ್ಯದ ಆಶಯಕ್ಕೆ ಸೋಲು ಉಂಟಾದಂತೆಯೇ!

ಬಿ.ಎಸ್. ತಿಮ್ಮೋಲಿ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !