ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವ ನಿಲುವು ಅಚ್ಚರಿದಾಯಕ

Last Updated 3 ಡಿಸೆಂಬರ್ 2020, 19:00 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಸೌಥ್‌ಹಾಲ್‌ನ ರಸ್ತೆಯೊಂದಕ್ಕೆ ಸಿಖ್ಖರ ಗುರು ಗುರುನಾನಕರ ಹೆಸರನ್ನು ಇಡಲು ಅಲ್ಲಿನ ಕೌನ್ಸಿಲ್‌ ನಿರ್ಣಯಿಸಿದೆಯಂತೆ. ಈ ಗೌರವವನ್ನು ಭಾರತೀಯರು ಪ್ರಶಂಸಿಸಿದ್ದಾರೆ ಮತ್ತು ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ವಿಪರ್ಯಾಸವೆಂದರೆ, ನಾವು ನಮ್ಮ ದೇಶದಲ್ಲಿ ರಸ್ತೆ, ಸ್ಮಾರಕ ಮತ್ತು ಕಟ್ಟಡಗಳಿಗೆ ಇರುವ ಇಂಗ್ಲಿಷರ ಹೆಸರನ್ನು ಯಾವುದೋ ‘ಇಸಂ’ನಿಂದಾಗಿ ಬದಲಿಸುತ್ತಿದ್ದೇವೆ. ಹಾಗೆಯೇ ಅವರ ಕೆಲವು ಪ್ರತಿಮೆಗಳನ್ನೂ ತೆಗೆಯುವ ಪ್ರಯತ್ನ ನಡೆದಿದೆ.

ಬ್ರಿಟಿಷರು ಈ ದೇಶವನ್ನು ಲೂಟಿ ಮಾಡಿದ್ದಾರೆ, ಎರಡು ಶತಮಾನಗಳ ಕಾಲ ಆಳಿದ್ದಾರೆ ಎನ್ನುವುದು ಎಷ್ಟು ಸತ್ಯವೋ ಅವರು ಈ ದೇಶಕ್ಕೆ ಬರದಿದ್ದರೆ ಭಾರತವು ಒಂದು ದೇಶವಾಗಿ ಹೊರಹೊಮ್ಮದೆ, ಸದಾ ಬಡಿದಾಡಿಕೊಳ್ಳುವ ಸುಮಾರು 500 ಸಂಸ್ಥಾನಗಳಾಗಿಯೇ ಉಳಿಯುತ್ತಿತ್ತು ಎನ್ನುವುದೂ ಅಷ್ಟೇ ಸತ್ಯ. ಸ್ವಾತಂತ್ರ್ಯದ ಪರಿಕಲ್ಪನೆ ಉಂಟಾಗಿದ್ದು ಬ್ರಿಟಿಷರಿಂದ. ಹೀಗಿರುವಾಗ, ಭಾರತೀಯರ ಈ ದ್ವಂದ್ವ ನೀತಿ ಆಶ್ಚರ್ಯಕರವಾಗಿದೆ.

ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT