ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಮಾನಕ್ಕೆ ಆಸ್ಪದ ಆಗದಿರಲಿ

ಅಕ್ಷರ ಗಾತ್ರ

ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಜೀವನಚರಿತ್ರೆ‌ ಕುರಿತ ‘ಮಹಾನಾಯಕ’ ಧಾರಾವಾಹಿ ಕನ್ನಡದ ಝೀ ವಾಹಿನಿಯಲ್ಲಿ ಬಿತ್ತರವಾಗುತ್ತಿರುವುದು ಸರಿಯಷ್ಟೆ. ಈ ಧಾರಾವಾಹಿಯ ಚಿತ್ರಗಳನ್ನು ಒಳಗೊಂಡ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಅನಾವರಣಗೊಳಿಸುವ ಗೀಳು‌ ಇತ್ತೀಚೆಗೆ ಕೆಲವರಿಗೆ ಅಂಟಿಕೊಂಟಿದೆ. ಕೆಲವು ದಿನಗಳ ನಂತರ ಆ ಶೀಟು ಬಿಸಿಲು, ಗಾಳಿಯ ಹೊಡೆತಕ್ಕೆ ಸಿಲುಕಿ ಹರಿಯುತ್ತದೆ. ಶಿಥಿಲವಾದ ನಂತರ ಅದು ನೆಲದ‌ ಮೇಲೆ ಬೀಳುವುದು ಸಹಜ. ಆಗ ಆ ಮಹಾನಾಯಕನಿಗೆ ಅಗೌರವ ತೋರಿದಂತೆ ಆಗುವುದಿಲ್ಲವೇ? ಕಿಡಿಗೇಡಿಗಳು ಅದನ್ನು ವಿರೂಪಗೊಳಿಸಿದರೆ ಅದರಿಂದ ವಿನಾಕಾರಣ ಅಶಾಂತಿಗೆ ಆಸ್ಪದವಾಗುತ್ತದೆ. ಧಾರಾವಾಹಿಯ ಬಗ್ಗೆ ಅಭಿಮಾನವಿದ್ದರೆ ಅದರ ನಿರ್ದೇಶಕರು, ಕಲಾವಿದರು ಮತ್ತು ವಾಹಿನಿಯವರನ್ನು ಕರೆಸಿ ಸನ್ಮಾನಿಸಬಹುದು. ಅದು ಬಿಟ್ಟು ಅಭಿಮಾನವು ಅಪಮಾನಕ್ಕೆ ಆಸ್ಪದ ನೀಡಲು ಅವಕಾಶ ಮಾಡಬಾರದು.

- ಎಸ್.ರವಿ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT