ಶನಿವಾರ, ಸೆಪ್ಟೆಂಬರ್ 25, 2021
29 °C

ಸಭ್ಯತೆ ಮೀರದಿರುವುದೇ ವಸ್ತ್ರಸಂಹಿತೆಯ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅವಳನ್ನು ಕಾಣುವ ನೋಟ ಬದಲಾಗಬೇಕೇ ವಿನಾ ಅವಳಲ್ಲ’ ಎಂದು ಡಾ. ಗೀತಾ ವಸಂತ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜುಲೈ 22) ವಿಶ್ಲೇಷಿಸಿದ್ದಾರೆ. ಹೆಣ್ಣಿಗೆ ತನ್ನ ಉಡುಗೆ-ತೊಡುಗೆಯೂ ಒಂದು ಆಭರಣ. ಅದು ಸಭ್ಯತೆ ಮೀರಬಾರದು. ಸಭ್ಯತೆಯನ್ನು ಮೀರುವಂತಿದ್ದರೆ ಅದು ಬೇರೆ ಆಯಾಮಕ್ಕೆ ನೆಲೆಯಾಗುತ್ತದೆ. ಹೆಣ್ಣಿಗೆ ಸೌಂದರ್ಯವೂ ಒಂದು ಶಾಪ ಎನ್ನುತ್ತಾರೆ. ಇದಕ್ಕೆ ನಮ್ಮ ಪುರಾಣ, ಇತಿಹಾಸಗಳಲ್ಲೂ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ವಿಕಸಿಸುವುದು ಅವಳ ಪ್ರಾಕೃತಿಕ ಹಕ್ಕು ನಿಜ. ಆದರೆ ಅದು ವಿಕೃತವಾಗಬಾರದು. ಈಗಲೂ ಕೆಲವು ಸಿನಿಮಾ, ರಿಯಾಲಿಟಿ ಷೋಗಳಲ್ಲಿ ಹೆಣ್ಣಿನ ಉಡುಪು ಸಭ್ಯತೆ ಮೀರಿ ಸೆಳೆಯುತ್ತದೆ. ಇಂಥವು ಅಗತ್ಯವಿಲ್ಲದಿದ್ದರೂ ಕೆಲವರಿಗೆ ತಮ್ಮ ಮೈಮಾಟ ತೋರಿಸುವುದು ಒಂಥರಾ ಫ್ಯಾಷನ್ ಎಂಬಂತಾಗಿದೆ! ಗಾಳಿ ಬೇಕು, ಬಿರುಗಾಳಿ ಬೇಡ. ಹಾಗೆಯೇ ಸಭ್ಯತೆ ಮೀರದಿರುವುದೇ ವಸ್ತ್ರಸಂಹಿತೆಯ ಆಶಯವೇ ಹೊರತು ಯಾವುದೇ ನಿರ್ಬಂಧದ ಮುದ್ರೆ ಹಾಕುವುದಲ್ಲ. 

–ಗಣಪತಿ ಶಿರಳಗಿ, ಸಾಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು