ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ದ್ರವ್ಯ ವ್ಯಸನಿಗಳು ಅಪರಾಧಿಗಳಲ್ಲ

ಅಕ್ಷರ ಗಾತ್ರ

‘ಮಾದಕ ವಸ್ತು ದಂಧೆ ಮಾಡುವವರು, ವ್ಯಸನಿಗಳಿಗೆ ಶಿಕ್ಷೆಯಾಗುವಂತೆ ಹಾಗೂ ಜಾಮೀನು ಸಿಗದಂತೆ ಮಾಡಲು ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಪರಾಧಿಗಳ ಕುರಿತು ಕಠಿಣ ಕ್ರಮದ ಈ ಮಾತು ಸ್ವಾಗತಾರ್ಹ. ಆದರೆ ವ್ಯಸನಿಗಳನ್ನೂ ಅಪರಾಧಿಗಳಂತೆ ಕಂಡು ಒಂದೇ ತಕ್ಕಡಿಯಲ್ಲಿ ತೂಗುವ ಸಾಂಪ್ರದಾಯಿಕ ಸಾಮಾಜಿಕ ನಂಬಿಕೆಗಳಿಗೆ ಈ ಮಾತು ಕನ್ನಡಿ ಹಿಡಿದಿದೆ. ಡ್ರಗ್ ಪೆಡ್ಲರ್‌ಗಳನ್ನು ಮಟ್ಟಹಾಕಿ ಶಿಕ್ಷೆ ವಿಧಿಸುವುದು ಸರಿ. ಆದರೆ, ವ್ಯಸನಿಗಳನ್ನೂ ಕಾಯ್ದೆಯ ಆಧಾರದಲ್ಲಿ ಜೈಲಿಗೆ ತಳ್ಳುವುದನ್ನು ಒಪ್ಪಲಾಗದು.

ವಿಶ್ವಸಂಸ್ಥೆಯ ‘ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ’ ಸಿದ್ಧಪಡಿಸಿದ ಇತ್ತೀಚಿನ ವರದಿಗಳಲ್ಲಿ ಮಾದಕ ದ್ರವ್ಯ ವ್ಯಸನ ಒಂದು ಸಾಂಕ್ರಾಮಿಕ ರೋಗ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದುವೇಳೆ ರೋಗವಾದರೆ ಅದನ್ನು ಗುಣಪಡಿಸುವ ಸಾಧ್ಯತೆ ಇರಬೇಕು. ವ್ಯಸನಿಗಳನ್ನು ಜೈಲಿಗೆ ತಳ್ಳಿದಾಗ ಮಾದಕ ದ್ರವ್ಯ ಸಿಗದ ಕಾರಣಕ್ಕೆ ಅವರು ಅತಿರೇಕವಾಗಿ ವರ್ತಿಸಬಹುದು, ಆತ್ಮಹತ್ಯೆಗೆ ಪ್ರಯತ್ನಿಸಬಹುದು. ವ್ಯಸನಿಗಳಲ್ಲಿ ಸಾಮಾನ್ಯವಾಗಿ ಇರುವ ಏಡ್ಸ್, ಹೆಪಟೈಟಿಸ್–ಸಿಯಂತಹ ರೋಗಗಳಿಗೆ ಚಿಕಿತ್ಸೆ ಸಿಗದೆ ಸಾಯಲೂಬಹುದು. ಹೀಗಾಗಿ ನಮ್ಮ ಸಮಾಜವು ವ್ಯಸನಿಗಳನ್ನು ರೋಗಿಗಳಂತೆ ಕಾಣಬೇಕೇ ಹೊರತು ಅಪರಾಧಿಗಳಂತಲ್ಲ. ಮಾದಕ ದ್ರವ್ಯ ಜಾಲವನ್ನು ಭೇದಿಸುವ ಜತೆಗೆ, ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು. ಸ್ವಲ್ಪ ಪ್ರಯತ್ನ ಮಾಡಿದಲ್ಲಿ ವ್ಯಸನಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಅವರನ್ನು ಸುಧಾರಿಸಿ, ಮುಖ್ಯವಾಹಿನಿಗೆ ತರಲು ಸಾಧ್ಯವಿದೆ.

ಸಂದೀಪ್ ಕೆ., ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT