ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಇ-ಖಾತೆಗೆ ವ್ಯವಸ್ಥೆ ಎಂದು?

Last Updated 18 ಮಾರ್ಚ್ 2022, 21:10 IST
ಅಕ್ಷರ ಗಾತ್ರ

ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 14.6.2013ರಿಂದ ಈಚೆಗೆ ನೋಂದಣಿಯಾದ ನಿವೇಶನಗಳಿಗೆ ಇ- ಖಾತೆ ಮಾಡಲಾಗುತ್ತಿಲ್ಲ. ಇದರಿಂದ ನಿವೇಶನದ ಪರಭಾರೆ ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಿಸಿಕೊಳ್ಳಲು ಬ್ಯಾಂಕಿ ನಿಂದ ಸಾಲ ಸೌಲಭ್ಯ ಸಹ ಲಭಿಸುತ್ತಿಲ್ಲ. ನಿವೇಶನದಾರರು ಇತ್ತೀಚಿನ ಮಾಹಿತಿಗೆ ಪಂಚಾಯಿತಿ ಕಚೇರಿಗೆ ಪದೇ ಪದೇ ಅಲೆಯುವಂತಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಈ ಕುರಿತು ಶೀಘ್ರ ಕ್ರಮ ಕೈಗೊಂಡರೆ, ವಿಶೇಷವಾಗಿ ಇಳಿವಯಸ್ಸಿನಲ್ಲಿ ಒಂದು ಗೂಡು ಕಟ್ಟಿಕೊಳ್ಳಲು ಹಂಬಲಿಸುವ ಹಿರಿಯ ನಾಗರಿಕರಿಗೆ ಸಹಾಯವಾಗುತ್ತದೆ.

-ಬಿಂಡಿಗನವಿಲೆ ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT