ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಇಂಧನ: ಬೇಕು ಒತ್ತು

Last Updated 13 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕಾರ್ಬನ್ ಬಾಂಬ್ ಕುರಿತ ನಾಗೇಶ ಹೆಗಡೆ ಅವರ ಲೇಖನ (ಪ್ರ.ವಾ., ಅ. 13) ಎಚ್ಚರಿಕೆಯ ಸಂದೇಶದಂತಿದೆ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್ ಅನಿಲ ಹೆಚ್ಚಾಗಿ ಭೂತಾಪಮಾನ ಏರಿದೆ. ಅಮೆರಿಕದಂಥ ಮುಂದುವರಿದ ದೇಶಗಳು ಅತಿ ಹೆಚ್ಚು ಕಾರ್ಬನ್ ಬಾಂಬ್ ಸಿಡಿಸಿ ವಾಯುಮಾಲಿನ್ಯ ಉಂಟುಮಾಡುತ್ತಿವೆ.

ಇರುವುದೊಂದೇ ಭೂಮಿಯಲ್ಲಿ ಸಕಲ ಜೀವರಾಶಿಗಳೂ ಬದುಕುವುದಕ್ಕೆ ಪೂರಕವಾಗಿ ಪೆಟ್ರೋಲ್ ಮಾಲಿನ್ಯವನ್ನು ಕಡಿಮೆ ಮಾಡಬೇಕಾಗಿದೆ. ಪೆಟ್ರೋಲ್ ಇಂಧನಕ್ಕೆ ಪರ್ಯಾಯವಾಗಿ ಪರಿಸರಸ್ನೇಹಿ ಸೌರ, ವಾಯು, ಜಲ, ಜೈವಿಕ ಇಂಧನಕ್ಕೆ ಹೆಚ್ಚು ಒತ್ತು ನೀಡುವುದರಿಂದ ಕಾರ್ಬನ್ ಬಾಂಬ್‌ಗೆ ಕಡಿವಾಣ ಹಾಕಬಹುದು. ಎಲ್ಲ ದೇಶಗಳು ಪರಿಸರಸ್ನೇಹಿ ಪರ್ಯಾಯ ಇಂಧನಕ್ಕೆ ಸೂಕ್ತ ಯೋಜನೆ ರೂಪಿಸಿ ಭೂಮಿಯನ್ನು ರಕ್ಷಿಸಬೇಕಾಗಿದೆ.

ಡಾ. ಎಚ್.ಆರ್‌.ಪ್ರಕಾಶ್,ಕೆ.ಬಿ.ದೊಡ್ಡಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT